About the Author

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ.

ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ಓ ಸಖೀ!, ಸ್ವಪ್ನಸೃಷ್ಟಿ, ಬೇಹು, ಛದ್ಮವೇಷ, ಇವು ಕಾದಂಬರಿಗಳು, ಹಾಗೇ ಯತಿರಾಜ್ ವೀರಾಂಬುಧಿಯವರ ಕಥಾಸಂಕಲನಗಳು, ಕೃತಾಕೃತ, ಬಿಂದು ಬಿಂದು ಸೇರಿ ಸಿಂಧು, ತೆನೆ ತೆನೆ ಕೂಡಿದ್ರೆ ಬಳ್ಳ, ಹನನ. ಅವರ ಲೇಖನಮಾಲೆ- ಜೀವನ ಮೌಲ್ಯ, ಮಾಸದ ಮಾತು, ಮನೆ ಮಾತು, ಮಾಸದ ವಿಜಯ, ಯುವ-ಕಥೆ, ಅನ್ಯೋಕ್ತಿ, ಯಶಸ್ಸೇ ಹಾದಿ, ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು, ಲೈಫು ಇಷ್ಟೇನೆ..!, ಜಯ ನಿಶ್ಚಯ, ಮಾಸದ ದಾಸವಾಣಿ. ಯತಿರಾಜ್ ಅವರು ಅನುವಾದದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ತೆಲುಗಿನಿಂದ ಡಾ.ಯಂಡಮೂರಿ ವೀರೇಂದ್ರನಾಥ್ ಅವರ ಆರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳೆಂದರೆ- ಕಣಿವೆಯಿಂದ ಶಿಖರಕ್ಕೆ, ನನ್ನ ಏಳ್ಗೆಗೆ ನಾನೇ ಏಣಿ, ಪ್ರೇಮ ಒಂದು ಕಲೆ, ಮಕ್ಕಳ ಹೆಸರಿನ ಪ್ರಪಂಚ, ಬೆಳಕು ಬೆಳದಿಂಗಳ ದೀಪಗಳು, ಯಶಸ್ವೀಭವ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಯತಿರಾಜ್‍ ವೀರಾಂಬುಧಿ

(11 Aug 1957)