ಧರೆಹೊತ್ತಿ ಉರಿದಾಗ ಸಂಪುಟ 2

Author : ಆರ್‌.ಕೆ. ಹುಡಗಿ (ರಾಹು)

Pages 414

₹ 425.00




Year of Publication: 2015
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು- 560040
Phone: 9845096668

Synopsys

ಲೇಖಕ ಅಲೋಕ್ ಭಲ್ಲಾ ಅವರು 1993 ರಲ್ಲಿ ಸಂಕಲಿಸಿದ್ದ 46 ಕತೆಗಾರರ ಬೃಹತ್ ಸಂಪುಟವು ಆರ್‌.ಕೆ. ಹುಡಗಿ (ರಾಹು) ಅವರಿಂದ ಅನುವಾದಿತಗೊಂಡು ಕನ್ನಡದಲ್ಲಿ ಧರೆಹೊತ್ತಿ ಉರಿದಾಗ ಎಂಬ ಹೆಸರಿನ ಮೂರು ಭಾಗಗಳಲ್ಲಿ ಪ್ರಕಟಗೊಂಡಿದೆ.

ಪ್ರಪಂಚದ ವಿವಿಧ ಭಾಗಗಳಿಂದ ಜನ ಸಾಲು ಸಾಲುಗಟ್ಟಿ ಭಾರತಕ್ಕೆ ಬಂದರು. ಹಾಗೆ ಬಂದ ಎಲ್ಲರೂ ಇಲ್ಲಿಯೇ ತಮ್ಮ ಆವಾಸ ಕಂಡುಕೊಂಡು ನೆಲೆಯೂರಿ ನಿಂತರು. ತತ್ಪರಿಣಾಮವಾಗಿ ಆಗ ಭಾರತ ಜನ್ಮ ತಾಳಿತು ಎನ್ನುವ ಫಿರಾಖ್ ಗೋರಖ್ ಪುರಿ ಮಾತಿನ ಆಶಯದಂತೆ ಇಲ್ಲಿರುವ ಅನೇಕ ಬರಹಗಳ ಧೋರಣೆ, ಅಂಶಗಳು ಇದನ್ನೇ ಸಾರುವಂತದ್ದು.

ದಾವುಜೀ, ಆಶ್ರಯ, ನಮ್ಮ ದೇಶ, ಮೊಝಲ್, ನೈಜ ಪರಿಹಾರ, ಒಂದು ಹಳೆಯ ಕಥೆ, ಋಣ, ಏನೂ ಕಳೆದುಕೊಳ್ಳದವರು, ಸ್ಮಶಾನಕ್ಕೆ ಸಲ್ಲುವವರು, ನನ್ನ ಅವ್ವ, ದೇವರ ನಾಯಿ, 1947 ರ ಒಂದು ಕತೆ, ಬಿರುಗಾಳಿಯ ನಂತರ, ಮುಂತಾದ ಬರಹಗಳನ್ನು ಇಂತಿಜಾರ್‍ ಹುಸೇನ್, ನರೇಂದ್ರನಾಥ ಮಿತಾ, ಕಮಲೇಶ್ವರ, ನಾರಾಯಣ್ ಭಾರತಿ, ಅತ್ತಿಯಾ ಹುಸೇನ್, ರಮೇಶ್ ಚಂದ್ರಸೇನ್ ಮುಂತಾದವರ ಲೇಖನಗಳಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.

 

About the Author

ಆರ್‌.ಕೆ. ಹುಡಗಿ (ರಾಹು)

ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ.ಹುಡುಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಧಾರವಾಡ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು ​​​​​​. ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ.  ...

READ MORE

Related Books