ಆರಂಭಿಕ ಹಂತಗಳು

Author : ಎನ್. ಗಾಯತ್ರಿ (ಬೆಂಗಳೂರು)

Pages 148

₹ 100.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು - 560 001
Phone: 080-30578020/22

Synopsys

‘ಆರಂಭಿಕ ಹಂತಗಳು’ ನವಕರ್ನಾಟಕದ ‘ಲೋಕ ತತ್ವಶಾಸ್ತ್ರ ಪ್ರವೇಶಿಕೆ’ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯ ಸಂಪಾದಕರು ದೇವಿಪ್ರಸಾದ್ ಚಟ್ಟೋಪಾಧ್ಯಾಯರು. ತತ್ತ್ವಶಾಸ್ತ್ರವೆಂದರೆ ಯಾರೋ ವಿದ್ವಾಂಸರು ಮಾತ್ರ ತಮ್ಮತಮ್ಮಲ್ಲೇ ಚರ್ಚಿಸಿಕೊಳ್ಳುವ ನಿಗೂಢ ಮತ್ತು ಕಠಿಣವಾದ ಶಿಸ್ತು ಎಂಬ ಐತಿಹ್ಯವನ್ನು ದೂರಮಾಡಿ ಜನಸಾಮಾನ್ಯರಿಗೆ ವಿವಿಧ ತತ್ತ್ವಶಾಸ್ತ್ರ ಪ್ರೋತಗಳನ್ನು ಸರಳವಾಗಿ ನಿರೂಪಿಸುವ ಮಾಲಿಕೆ 'ಲೋಕ ತತ್ತ್ವಶಾಸ್ತ್ರ ಪ್ರವೇಶಿಕೆ',

ಈ ಕೃತಿ ಜನರ ತಾತ್ವಿಕ ಅಗತ್ಯಗಳನ್ನು ಕೇಂದ್ರೀಕರಿಸಿ ಪರಿಣಿತ ಮತ್ತು ವಿಮರ್ಶಾತ್ಮಕ ದೃಷ್ಟಿಯಿಂದ ಯಾವುದು ಮುನ್ನಡೆಗೆ ಸಹಕಾರಿ ಮತ್ತು ಯಾವುದು ಅವಘಡಗಳಿಗೆ ಕಾರಣ ಎಂಬುದನ್ನು ಸ್ವಯಂ ಕಂಡುಕೊಳ್ಳಲು ಕೈಪಿಡಿಯಾಗಿದೆ. 

About the Author

ಎನ್. ಗಾಯತ್ರಿ (ಬೆಂಗಳೂರು)
(17 January 1957)

ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...

READ MORE

Reviews

(ಹೊಸತು, ಜುಲೈ 2015, ಪುಸ್ತಕದ ಪರಿಚಯ)

ತತ್ತ್ವಶಾಸ್ತ್ರದ ಆರಂಭಿಕ ಹಂತವೆಂದರೆ ಮನುಷ್ಯ ಬೌದ್ಧಿಕವಾಗಿ ವಿಕಾಸಗೊಂಡು ತನ್ನ ಸುತ್ತಲಿನ ಪ್ರಕೃತಿಯ ರಹಸ್ಯಗಳನ್ನು ಅರಿಯಲು ಪ್ರಯತ್ನಿಸಿದ ಸಮಯವೆನ್ನಬಹುದು. ಬೆಳವಣಿಗೆ ಎಲ್ಲ ಜಗತ್ತು ಎಂದರೇನು, ಇದನ್ನು ಸೃಷ್ಟಿಸಿದ್ದು ಯಾರು, ಗ್ರಹತಾರೆಗಳ ಸೋಜಿಗವೇನು, ಇದರ ಹಿಂದಿನ ಶಕ್ತಿ ಎಲ್ಲಿದೆ ಮುಂತಾದ ಚಿಂತನೆಗಳು ಅಂದಿನ ದಾರ್ಶನಿಕರ ಅನುಭವದ ಹಿನ್ನೆಲೆಯಲ್ಲಿ ಎಲ್ಲ ಕಾಲದಲ್ಲಿ ದೇಶಗಳಲ್ಲೂ ನಡೆದಿದೆ. ಎಲ್ಲರ ದೃಷ್ಟಿಕೋನ ಒಂದೇ ರೀತಿಯಾಗಿದ್ದಿಲ್ಲ. ಇನ್ನೂ ಮುಖ್ಯ ಪ್ರಶ್ನೆಯೆಂದರೆ ಈ ಜಗತ್ತು ವಾಸ್ತವವೋ – ಭ್ರಮೆಯೋ ? ಭ್ರಮೆಯಾದರೆ ಸತ್ಯದ ಜಗತ್ತು ಎಲ್ಲಿದೆ ? ಇಂಥ ಚಿಂತನೆಗಳು ಕಾಡಿದಾಗ ಭೌತವಾದ ಮತ್ತು ಭಾವನಾವಾದಗಳೆಂಬ ಪ್ರಮುಖ ಎರಡು ವಿಚಾರಧಾರೆಗಳು ಜನ್ಮತಾಳಿದವು. ಮುಂದೆ ಪರಸ್ಪರ ಚರ್ಚೆ-ಗೊಂದಲಗಳು ತಲೆದೋರಿ ಜಗತ್ತಿನಾದ್ಯಂತ ಹಲವು ಶಾಖೋಪಶಾಖೆಗಳು ವಿಸ್ತರಿಸಿದವು. ಆರಂಭಿಕ ಹಂತವೆಂಬುದು ಇನ್ನೂ ಏನನ್ನೂ ನಿರ್ಧರಿಸಲಾಗದ ಅಪಕ್ವ ಸ್ಥಿತಿಯೆನ್ನಬಹುದು. ಆದರೆ ಅದರ ಮಹತ್ವವೇನೂ ಕಡಿಮೆಯದಲ್ಲ. ಇಂದಿನ ಎಲ್ಲ ತತ್ತ್ವಶಾಸ್ತ್ರದ ಮೂಲ ತಳಗಟ್ಟು ಎನ್ನಬಹುದು. ಇಂದು ಬೃಹದಾಕಾರಕ್ಕೆ ಬೆಳೆದು ನಿಂತಿರುವ ತತ್ತ್ವಶಾಸ್ತ್ರದ ಮೂಲದ ಹಂತಕ್ಕೆ ಹಿಂದಿರುಗಿ ಅದನ್ನು ಅರ್ಥೈಸಲು ಈ ಕೃತಿ ಸಹಕರಿಸುತ್ತದೆ. ಹಂತಹಂತವಾಗಿ ವಿಕಾಸಗೊಂಡಿರುವ ಬಗೆಯನ್ನೂ ಚರ್ಚಿಸುತ್ತದೆ. ತತ್ತ್ವಶಾಸ್ತ್ರವು ಮೊದಲು ಭೌತವಾದಿ ನೆಲೆಯಲ್ಲಿ ಅರ್ಥೈಸಲ್ಪಟ್ಟು ಮುಂದೆ ಭಾವನಾವಾದದತ್ತ ಹೊರಳಿದ್ದು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ತತ್ತ್ವಶಾಸ್ತ್ರದ ಉಗಮದತ್ತ ನಮ್ಮನ್ನು ಕರೆದೊಯ್ಯುವ ಪುಸ್ತಕ.

Related Books