1128 ರಲ್ಲಿ ಕ್ರೈಂ 27

Author : ಎಲ್. ಎನ್. ಮುಕುಂದರಾಜ್

Pages 79

₹ 60.00




Year of Publication: 2017
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನ ಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣ ಹಿಂಭಾಗ, ಮಲ್ಲತ್ತಹಳ್ಳಿ ಬೆಂಗಳೂರು – 560056

Synopsys

ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ’ಭಾರತೀಯ ಭಾಷಾ ನಾಟಕ ಮಾಲಿಕೆ’ ಆರಂಭಿಸಿದೆ. ಈ ಮಾಲಿಕೆಯ ಕೃತಿಯಿದು.

ಆಧುನಿಕ ನ್ಯಾಯ ವ್ಯವಸ್ಥೆ, ಪತ್ರಿಕೋದ್ಯಮಗಳ ಅಸಂಗತತೆ ಹಾಗೂ ಈ ವಲಯಗಳು ಕಾರ್‍ಯ ನಿರ್ವಹಿಸುವ ವಿಚಿತ್ರ ರೀತಿಗಳನ್ನು ತಿಳಿಹಾಸ್ಯದ ಹಾಗೂ ಕುಟುಕು ಶೈಲಿಯಲ್ಲಿ ಹೇಳುವ 1128 ರಲ್ಲಿ ಕ್ರೈಂ’  27 ’ ಮಲಯಾಳಂ ರಂಗಭೂಮಿಯ ಮುಖ್ಯ ಪ್ರಯೋಗಗಳಲ್ಲೊಂದು.

ಮಲಯಾಳಂ ಸಾಹಿತಿ ಸಿ.ಜೆ. ಥೋಮಸ್ ಅವರ ಈ ನಾಟಕವನ್ನು ಕನ್ನಡಕ್ಕೆ ತಂದವರು ತೇರಳಿ ಎನ್ ಶೇಖರ್ ಮತ್ತು ಎಲ್. ಎನ್. ಮುಕುಂದರಾಜ್.  1128 ರಲ್ಲಿ ಕ್ರೈಂ’  27 ನಾಟಕ ರಚನೆ ಹಾಗೂ ನಾಟಕ ವಿನ್ಯಾಸಗಳ ಬಗ್ಗೆ ಐವತ್ತರ ದಶಕದ ಮಲಯಾಳಂ ರಂಗಭೂಮಿಯಲ್ಲಿ ಚಾಲ್ತಿಯಲ್ಲಿದ್ದ ಕಟ್ಟುಪಾಡುಗಳನ್ನು ವಿರೋಧಿಸಿದ ವಿಶಿಷ್ಟ ನಾಟಕ. ನೈತಿಕ ಹಾಗೂ ರಾಜಕೀಯ ವಿಷಯಗಳನ್ನು ಆಧರಿಸಿದ ’ಎಪಿಕ್’ ನಾಟಕಗಳನ್ನು ನೆನಪಿಗೆ ತರುವ  ಈ ನಾಟಕದಲ್ಲಿ ಬದುಕು, ಸಾವು, ನ್ಯಾಯ, ರಾಜ್ಯಾಡಳಿತ , ಪತ್ರಿಕೋದ್ಯಮ, ಪೋಲಿಸ್ ಮೊದಲಾದ ಹಲವು ಸಂಸ್ಥೆಗಳನ್ನು ವಿಮರ್ಶಿಸಲಾಗಿದೆ.

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books