ಎ. ಕೆ. ರಾಮಾನುಜನ್ ನೆನಪಿನ ಸಂಪುಟ

Author : ಟಿ.ಪಿ. ಅಶೋಕ

Pages 170

₹ 50.00




Year of Publication: 1993
Published by: ಕರ್ನಾಟಕ ಸಂಘ ಪುತ್ತೂರು
Address: ದಕ್ಷಿಣ ಕನ್ನಡ

Synopsys

ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿ, ವಿಶ್ವಮಟ್ಟದಲ್ಲಿ ಕನ್ನಡದ ಕಂಪನ್ನು ಪಸರಿದವರು ಎ. ಕೆ. ರಾಮಾನುಜನ್. ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಭಾಷಾ ತಜ್ಞ ಹೀಗೆ ಅನೇಕ ಪ್ರಕಾರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರ ಕುರಿತು ಪ್ರತಿಭಾ ನಂದಕುಮಾರ್, ಯು. ಆರ್. ಅನಂತಮೂರ್ತಿ ಮುಂತಾದವರು ಬರೆದ ಲೇಖನಗಳು ಇಲ್ಲಿವೆ. ‘ಅಕ್ರೂರ ನೆನಪುಗಳು (ಎಚ್. ಕೆ. ರಾಮಚಂದ್ರಮೂರ್ತಿ), ರಾಮಾನುಜನ್, ಏಕೆ? (ವೈ. ಎನ್. ಕೆ.),  ಶ್ಲೋಕ, ಷಟ್ಟದಿಗಳ ನಡುವೆ... ಚಿಗುರು ಮಾವಿನೆಲೆ ಮೂರು' (ಪಿ. ಲಂಕೇಶ್), `ರಾಮಾನುಜನ್ : ಮಹಾಪ್ರತಿಭೆ' (ಸುಮತೀಂದ್ರ ನಾಡಿಗ), ವೈವಿಧ್ಯಮಯ ವ್ಯಕ್ತಿತ್ವ - ಅನನ್ಯ ಪ್ರತಿಭೆ (ಪಿ. ಶ್ರೀನಿವಾಸ ರಾವ್) ಮುಂತಾದ ಲೇಖನಗಳನ್ನು ಲೇಖಕ ಟಿ. ಪಿ. ಅಶೋಕ್‌ ಅವರು ಸಂಪಾದಿಸಿದ್ದಾರೆ. 

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books