ಎ ಪಾಂಟಿಫ್ ಆಫ್ ಪಿಕಾಕಶೈರ್

Author : ಬಸವರಾಜ ನಾಯ್ಕರ

Pages 207

₹ 395.00




Year of Publication: 2019
Published by: ಸಿವಿಜಿ ಬುಕ್ಸ್
Address: ಲಗ್ಗೆರೆ, ಬೆಂಗಳೂರು-560058

Synopsys

ಧಾರವಾಡದ ನವಲಗುಂದದ ಅವಧೂತ ಶ್ರೀ ನಾಗಲಿಂಗ ಸ್ವಾಮಿ ಅವರ ದಿವ್ಯ ಜೀವನ ಚಿತ್ರವನ್ನು ನೀಡುವ ಕೃತಿ ಇದು. ನಾಥಪಂಥಕ್ಕೆ ಸೇರಿದ ಶ್ರೀಗಳು 20ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದರು. ಅದೃಶ್ಯವಾಗುವುದು, ಗಾಳಿಯಲ್ಲಿ ಕೈ ಬೀಸಿ ವಸ್ತುಗಳನ್ನು ಬೇಕಾದ ವಸ್ತುಗಳನ್ನು ಸೃಷ್ಟಿಸುವುದು, ದೂರದೂರಿನಲ್ಲಿದ್ದವರ ಮಾತುಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯ, ಭವಿಷ್ಯವನ್ನು ತಿಳಿಯುವುದು ಇತ್ಯಾದಿ ಪವಾಡಗಳನ್ನು ಮಾಡಿದ ಸಂತರು. ಸಾಮಾನ್ಯರನ್ನು ಅಧ್ಯಾತ್ಮದತ್ತ ಸೆಳೆದವರು. ಇವರ ಖ್ಯಾತಿ ದೂರದೂರದವರೆಗೂ ಹಬ್ಬಿದಂತೆ ಮೈಸೂರು ಮಹಾರಾಜರು ಸಹ ಇವರ ಪಾದಸ್ಪರ್ಶದಿಂದ ಕೃತಾರ್ಥರಾಗಿದ್ದು, ತಮ್ಮ ಎರಡನೇಯ ಮಗನ ಮದುವೆಗೆ ಆಗಮಿಸಿ ಹರಸುವಂತೆ ಆಮಂತ್ರಿಸಿದ್ದರು. ಭಾರತೀಯ ಸಂತರ ಜೀವನ ಚರಿತ್ರೆಯ ಕೃತಿಗಳಲ್ಲಿ ನವಲಗುಂದದ ಅವಧೂತ ಶ್ರೀ ನಾಗಲಿಂಗ ಸ್ವಾಮಿ ಅವರ ಜೀವನ ಚರಿತ್ರೆಯ ಈ ಕೃತಿಯು ಸ್ಥಾನ ಪಡೆದಿದೆ.   

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books