ಆದಯ್ಯನ ವಚನಗಳು

Author : ಫ.ಗು. ಹಳಕಟ್ಟಿ

Pages 69

₹ 0.00




Year of Publication: 1931
Published by: ಫ.ಗು. ಹಳಕಟ್ಟಿ
Address: ಹಿತಚಿಂತಕ ಪ್ರಿಂಟಿಂಗ್ ಪ್ರೆಸ್, ಉಪಲಿಬುರುಜ ಬಳಿ, ವಿಜಾಪುರ.

Synopsys

ಆದಯ್ಯನ ವಚನಗಳು-ಫ.ಗು. ಹಳಕಟ್ಟಿ ಅವರ ವಚನಗಳ ಸಂಪಾದಿತ ಕೃತಿ. ಪುರಾತನ ಶಿವಶರಣರಲ್ಲಿ ಆದಯ್ಯ ಎಂಬ ಶರಣನು ಪ್ರಮುಖ. ಆತನ ವಚನಗಳು ಚದುರಿದಂತೆ ಅಲ್ಲಿ ಇಲ್ಲಿ  ಕೆಲ ಕೃತಿಗಳಲ್ಲಿ ಕಾಣ ಸಿಗುತ್ತವೆ. ಆದರೆ, ಆತನ ಬಹುಸಂಖ್ಯೆಯ ವಚನಗಳು ಒಂದೆಡೆ ಸಿಗುವುದೇ ಈ ಕೃತಿಯ ವೈಶಿಷ್ಟ್ಯ. ಈತನ ಮೂಲ ಗುಜರಾತ ರಾಜ್ಯದ ದ್ವಾರಕಾನಗರ. ತಂದೆ ಘೋರದತ್ತ, ತಾಯಿ ಪುಣ್ಯವತಿ. ವ್ಯಾಪಾರ ನಿಮಿತ್ತವಾಗಿ ಕರ್ನಾಟಕದ ಈಗಿನ ಗದಗ ಬಳಿಯ ಲಕ್ಷ್ಮೇಶ್ವರಕ್ಕೆ ಬರುತ್ತಾನೆ. ಇಲ್ಲಿ ಚಂದ್ರಾದಿತ್ಯ ಎಂಬ ಅರಸ ಆಳುತ್ತಿದ್ದ. ನಗರ ಸಂಚಾರಕ್ಕೆ ಹೊರಟಿದ್ದಾಗ ಪಾರಿಸಶೆಟ್ಟಿ ಎಂಬ ಜೈನ ವರ್ತಕನ ಪುತ್ರಿ ಪದ್ಮಾವತಿಯು ಕಣ್ಣಿಗೆ ಬಿದ್ದು, ಅವಳಲ್ಲಿ ಈತ ಮೋಹಿತನಾಗುತ್ತಾನೆ. ಪದ್ಮಾವತಿಯೂ ಶೈವ ದೀಕ್ಷೆ ಅನುಸಾರ ಮದುವೆಯಾಗುತ್ತಾಳೆ. ಈಕೆ ಒಬ್ಬಳೇ ಮಗಳಾದ್ದರಿಂದ ಆದಯ್ಯನೂ ಇಲ್ಲಿಯೇ ಉಳಿಯಬೇಕಾಯಿತು. ನಂತರ ಶಿವಶರಣರ ಪರಿಚಯವಾಗಿ ವಚನ ಚಳವಳಿಯ ಭಾಗವಾಗುತ್ತಾನೆ. ಹೀಗೆ ಆತನ ಜೀವನ ವೃತ್ತಾಂತದೊಂದಿಗೆ ಆತನ ವಚನಗಳ ಸಾರವನ್ನು ವಿಶ್ಲೇಷಿಸಲಾಗಿದೆ. ಸೌರಾಷ್ಟ್ರ ಸೋಮೇಶ್ವರ ಎಂಬುದು ಆದಯ್ಯನ ವಚನಾಂಕಿತ.

About the Author

ಫ.ಗು. ಹಳಕಟ್ಟಿ
(02 July 1880 - 29 June 1964)

‘ವಚನ ಪಿತಾಮಹ’ ಎಂದೇ ಪ್ರಸಿದ್ಧರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಧಾರವಾಡದಲ್ಲಿ 1880ರ ಜುಲೈ 2ರಂದು ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಾದೇವಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಉನ್ನತ ಶಿಕ್ಷಣವನ್ನು ಮುಂಬಯಿನಲ್ಲಿ ಪಡೆದರು. 1904ರಲ್ಲಿ ಎಲ್ಎಲ್ ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆರಂಭಿಸಿದರು. 1923ರಲ್ಲಿ ಬಿಜಾಪುರದಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ಮುಂಬಯಿ ವಿಧಾನಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ...

READ MORE

Related Books