ಆದಿಕವಿ ವಾಲ್ಮೀಕಿಯ ಕಥನಶೈಲಿ

Author : ಎಲ್. ವಿ. ಶಾಂತಕುಮಾರಿ

Pages 200

₹ 150.00




Year of Publication: 2009
Published by: ಸಾಹಿತ್ಯ ಸಿಂಧು ಪ್ರಕಾಶನ
Address: ನೃಪತುಂಗ ರಸ್ತೆ,ಬೆಂಗಳೂರು

Synopsys

ರಾಮಾಯಣ ಕೃತಿಯಲ್ಲಿ ಬಳಸಲಾದ ಶೈಲಿಯು ಓದುಗರಲ್ಲಿ ಅಚ್ಚರಿಯನ್ನು ಮೂಡಿಸುವಂತಿದೆ. ವಾಲ್ಮೀಕಿ ಮಹರ್ಷಿಯವರ ಕಥೆ ರಚಿಸುವ ಶೈಲಿಯು ಸುಲಭ ಮತ್ತು ಸುಂದರವಾಗಿದ್ದು, ಕವಿತೆಯ ನಿರೂಪಣಾ ಶೈಲಿಯ ವಿಶೇಷತೆ ಮತ್ತು ಕೃತಿಯಲ್ಲಿರುವ ರಹಸ್ಯವನ್ನು ವಿವರಿಸಲಾಗಿದೆ. ಮಾನವೀಯ ಬಾಂಧವ್ಯಗಳ ಚಿತ್ರಣ, ವಾಲ್ಮೀಕಿಯ ವಾಸ್ತುಶಿಲ್ಪ ಕಥನಶೈಲಿ ಮುಂತಾದವುಗಳ ಕುರಿತು ಲೇಖಕಿ ತಮ್ಮ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಮಹಾಕಾವ್ಯದ ನಾಯಕನಿಗೆ ಅವಶ್ಯವಾದ ಗುಣ ಸಂಪನ್ನತೆ, ಶಾರೀರಿಕ ಸಲ್ಲಕ್ಷಣಗಳನ್ನು ವಾಲ್ಮೀಕಿಯವರು ಪರಿಚಯಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ಕಂಡು ಬರುವ ಸಂಕೀರ್ಣತೆ, ಮಾನವೀಯ ಮತ್ತು ಕೌಟುಂಬಿಕ ಸಂಬಂಧಗಳು, ಪ್ರಕೃತಿ ಸೌಂದರ್ಯದ ವರ್ಣನೆ, ಮಾಯಾವಾಸ್ತವವಾದ, ರಾಜಧರ್ಮ ನಿರೂಪಣೆ, ಎಲ್ಲವನ್ನೂ ಸುಂದರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Related Books