ಆದ್ಯ ಸ್ತ್ರೀಪರ ಚಿಂತಕಿ ಪಂಡಿತಾ ರಮಾಬಾಯಿ ಸರಸ್ವತಿ

Author : ಗೀತಾ ಶೆಣೈ

Pages 120

₹ 80.00




Year of Publication: 2013
Published by: ಸ್ನೇಹ ಪ್ರಿಂಟರ್ಸ್‌
Address: #114, 4ನೇ ಅಡ್ಡರಸ್ತೆ, ಬಿಸಿಸಿ ಲೇಔಟ್‌, ಅತ್ತಿಗುಪ್ಪೆ, ವಿಜಯನಗರ ಎರಡನೇ ಹಂತ, ಬೆಂಗಳೂರು
Phone: 08023392814

Synopsys

ಭಾರತದ ಆದ್ಯ ಸ್ತ್ರೀಪರ ಚಿಂತಕಿ ಪಂಡಿತಾ ರಮಾಬಾಯಿ ಸರಸ್ವತಿ ಈ ನೆಲದಲ್ಲಿ ಮಹಿಳಾ ವಿಮೋಚನಾ ಹೋರಾಟದ ಬೀಜವನ್ನು ಬಿತ್ತಿದ ಮೊದಲ ಸ್ತ್ರೀವಾದಿ. ತನ್ನ ಇಡೀ ಬದುಕನ್ನು ದಮನಿತರು ಮತ್ತು ಶೋಷಿತ ಮಹಿಳೆಯರ ಸಬಲೀಕರಣಕ್ಕಾಗಿ ಮುಡಿಪಾಗಿಟ್ಟವರು.  ಇವರು ಆರಂಭಿಸಿದ ಮಹಿಳಾ ಸಮಾಜಗಳು, ವೃದ್ಧಾಶ್ರಮ, ಮಹಿಳಾ ಶಿಕ್ಷಣ ಸಂಸ್ಥೆ ಮುಂತಾದವು ಮಹಿಳಾ ಸಬಲೀಕರಣದ ಭಾಗವಾಗಿದ್ದವು. ಮೂಲತಃ ಕರ್ನಾಟಕದ ಕರಾವಳಿ ಪ್ರದೇಶದ ದಕ್ಷಿಣ ಕನ್ನಡ ಜಿಲ್ಲೆಯವರಾದ ರಮಾಬಾಯಿ, ಎಳೆಯ ವಯಸ್ಸಿನಲ್ಲಿ ಕರ್ನಾಟಕವನ್ನು ತೊರೆದು ದೇಶದ ವಿವಿಧೆಡೆ ನೆಲೆಸಿದವರು. ಅವರ ಮಾತೃಭೂಮಿ ಕರ್ನಾಟಕವಾಗಿದ್ದರೆ, ಅವರ ಕರ್ಮಭೂಮಿ ಮಹಾರಾಷ್ಟ್ರ. ಬಂಗಾಲ ಮತ್ತು ಮಹಾರಾಷ್ಟ್ರದ ಬ್ರಹ್ಮ ಸಮಾಜ, ಪ್ರಾರ್ಥನಾ ಸಮಾಜ ಮತ್ತು ಆರ್ಯ ಸಮಾಜಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಕೃತಿಯು ರಮಾಬಾಯಿ ಅವರ ಬದುಕು ಸಾಧನೆಯ ಕುರಿತು ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books