ಆಧುನಿಕೋತ್ತರ ವಾದ

Author : ಪ್ರಕಾಶ್‌ ಕೆ.

Pages 112

₹ 85.00




Year of Publication: 2014
Published by: ಚಿಂತನಾ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

’ಆಧುನಿಕೋತ್ತರವಾದ’ ಪ್ರಕಾಶ್ ಕೆ. ಅವರ ಅನುವಾದಿತ ಕೃತಿಯಾಗಿದೆ. ಕೃತಿಯ ಮೂಲ ಕರ್ತೃ ಐಜಾಜ್ ಅಹಮ್ಮದ್ ಅವರ ಮಾತುಗಳು ಬೆನ್ನುಡಿಯಲ್ಲಿವೆ. ಆಧುನಿಕೋತ್ತರವಾದವು ಹಲವು ವಿಭಿನ್ನ ಎಳೆಗಳಿಂದ ರಚಿತವಾಗಿದ್ದು, ಅದನ್ನು ಒಂದು ಸುಸಂಬದ್ಧ ಚಿಂತನೆಯಾಗಿ ಮಂಡಿಸಲು ಕಷ್ಟವಾಗುತ್ತದೆ. ಆದರೂ ಕೆಲವು ಲಕ್ಷಣಗಳು ಗಮನ ಸೆಳೆಯುತ್ತವೆ. ಇಲ್ಲಿನ ವಿಚಾರಗಳು ತೀರಾ ಭಿನ್ನ ವಿಧಾನಗಳಾದರೂ ಎಲ್ಲ ಆಧುನಿಕೋತ್ತರ ವಾದಗಳು ತಮ್ಮ ರಾಜಕೀಯ ಮನಗಾಣಿಕೆಯಲ್ಲಿ ಮಾರ್ಕ್ಸ್‌ವಾದ ಮತ್ತು ಕಮ್ಯುನಿಸ್ಟ್ ರಾಜಕೀಯದಿಂದ ದೂರ ಸರಿಯುವುದರಲ್ಲಿ ನಿರತವಾಗಿದೆ ಎಂದಿದ್ದಾರೆ. ಪ್ರಾಯೋಗಿಕ ರಾಜಕಾರಣದಲ್ಲಿ ಆಧುನಿಕೋತ್ತರವಾದದ ಅತ್ಯಂತ ದೂರಗಾಮಿ ಪರಿಣಾಮ ಯಾವುದೆಂದರೆ, ಅಣುರೂಪದ ರಾಜಕಾರಣವೆಂದು ನಾನು ಕರೆದಿದ್ದು: ಸಂಸ್ಕೃತಿ ಎಂಬ ಅಸ್ಪಷ್ಟ ಪರಿಕಲ್ಪನೆಯಿಂದ ವರ್ಗ ರಾಜಕೀಯವನ್ನು ಸ್ಥಾನಪಲ್ಲಟಗೊಳಿಸುವುದು, ಐಡಂಟಿಟಿ ರಾಜಕೀಯದಿಂದ ಸಮಾನತೆಯನ್ನು ರಾಜಕೀಯವನ್ನು ಮತ್ತಷ್ಟು ಸ್ಥಾನಪಲ್ಲಟಗೊಳಿಸುವುದು, ಅಸಂಖ್ಯಾತ ಸಣ್ಣ ವಿರೋಧಗಳ ಪ್ರತಿಪಾದನೆಯಿಂದ ಶೋಷಿತ ಮತ್ತು ತುಳಿತಕ್ಕೊಳಗಾದವರ ಐಕ್ಯತೆಯನ್ನು ಮುರಿಯುವುದು, ಆ ಮೂಲಕ ಪ್ರತಿರೋಧವೆಂಬುದು ಎಲ್ಲ ಕಡೆಯೂ ಇರುವಂತೆ, ಕಾಣುವಂತೆ ಆದರೆ ನಿರ್ದಿಷ್ಟವಾಗಿ ಎಲ್ಲಿಯೂ ಇರದಂತೆ ಮಾಡುವುದು ಎಂದಿದ್ದಾರೆ

About the Author

ಪ್ರಕಾಶ್‌ ಕೆ.

ಲೇಖಕ ಡಾ. ಪ್ರಕಾಶ್ ಕೆ. ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.  ಹಂಪಿ ಕನ್ನಡ ವಿವಿಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಉಗಮ ಮತ್ತು ಬೆಳವಣಿಗೆ ವಿಚಾರದಲ್ಲಿ ಪಿಹೆಚ್‌ಡಿ ಮಾಡಿರುವ ಇವರು ಅನುವಾದಕರೂ ಹೌದು.  ಕೃತಿಗಳು : ಆಧುನಿಕೋತ್ತರವಾದ (ಭಾಷಾಂತರ), ಫಿಡೆಲ್ ಕ್ಯಾಸ್ಟ್ರೋ ( ಭಾಷಾಂತರ), ನಿರುದ್ಯೋಗ: ಒಂದು ಪೆಡಂಭೂತ, ಭಯೋತ್ಪಾದನೆ- ಸಿಐಎ, ಜಿಹಾದಿ, ಹಿಂದುತ್ವ, ಸಮಬಾಳಿನ ಸಂಘರ್ಷ: ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಒಂದು ನೋಟ. ...

READ MORE

Related Books