ಆಗೋಲ್ಲ ಎನ್ನಬೇಡಿ, ಆಗುತ್ತೆ ಎನ್ನಿ!

Author : ಮಹಾಬಲೇಶ್ವರ ರಾವ್

Pages 120

₹ 90.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್ ಹತ್ತಿರ, ಬೆಂಗಳೂರು
Phone: 08022161900

Synopsys

‘ನಾನು ಅಸಹಾಯಕ, ನಿಷ್ಪ್ರಯೋಜಕ ಮತ್ತು ಇನ್ನು ನನಗಾರು ಗತಿ’ ಎಂಬ ನಕಾರಾತ್ಮಕ ಭಾವನೆಗಳಿಗೆ ದಾಸರಾಗಿ ಆಧುನಿಕ ಯುಗದ ಹದಿಹರೆಯದ ಹುಡುಗ-ಹುಡುಗಿಯರಲ್ಲಿ ಹಲವರು ಸೋಲಿನಿಂದ ಕಂಗೆಟ್ಟವರು ಓದಬೇಕಾದ ಕೃತಿ. 

 ಪ್ರಯತ್ನಗಳನ್ನು ಕೈಚೆಲ್ಲಿ ಆತ್ಮಹತ್ಯೆಗೆ ಮನಮಾಡುವುದು ಅಥವಾ ಮನೆಬಿಟ್ಟು ಓಡಿಹೋಗುವುದು ಯೋಚಿಸಬೇಕಾದ ವಿಷಯ. ‘ಮನಸ್ಸಿದ್ದರೆ ಮಾರ್ಗವಿದೆ’, ‘ಸಾಧಿಸಿದರೆ ಸಬಳ ನುಂಗಬಹುದು’, ‘ಇಲ್ಲಿ ಯಾವುದೂ ಅಸಾಧ್ಯವಲ್ಲ’, ‘ನಾವು ಗೆದ್ದೇ ಗೆಲ್ಲುವೆವು’, ‘ಈಸಬೇಕು ಇದ್ದು ಜೈಸಬೇಕು’ ಮೊದಲಾದ ರೂಢಿಯ ಮಾತುಗಳು ಬದುಕನ್ನು ಬೆಳಗುವ ಸಾಲುಗಳು ಇಲ್ಲಿ ಬರುತ್ತವೆ ಹಾಗೂ ಜೀವನದಲ್ಲಿ ನೊಂದವರಿಗೆ, ಹತಾಶರಾದವರಿಗೆ ಇಲ್ಲಿನ ಉಕ್ತಿಗಳು ಸ್ಪೂರ್ತಿ ಚಿಲುಮೆಯಾಗುತ್ತವೆ.

ಮನೋವಿಜ್ಞಾನದ ಕ್ಷೇತ್ರದ ತೀರ ಈಚಿನ ಕುಡಿಯಾಗಿರುವ ‘ಪಾಸಿಟಿವ್’ ಮನೋವಿಜ್ಞಾನದ ಮೂಲ ಆಶಯಗಳನ್ನು ನಿಜ ಜೀವನದ ಸ್ವಾರಸ್ಯಕರ ದೃಷ್ಟಾಂತಗಳೊಂದಿಗೆ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ಪುಸ್ತಕ ಎರಡು ಮುದ್ರಣ ಕಂಡಿದ್ದು 2013ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books