ಆಕಾಶಬುಟ್ಟಿ

Author : ಚೆನ್ನವೀರ ಕಣವಿ

Pages 60

₹ 45.00




Year of Publication: 1953
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತರ, ಮೈಸೂರು
Phone: 2513821/9880749412

Synopsys

’ಸಮನ್ವಯ ಕವಿ’ ಚೆನ್ನವೀರ ಕಣವಿ ಅವರ ಮೂರನೆಯ ಕವನ ಸಂಕಲನ ’ಆಕಾಶಬುಟ್ಟಿ’. ಈ ಸಂಕಲನದಲ್ಲಿ ಕಣವಿಯವರ 50 ಕವಿತೆಗಳಿವೆ. ’ಆಕಾಶಬುಟ್ಟಿ’ಯು 1953ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ಈ ಸಂಕಲನವು ಕಣವಿಯವರ ಕಾವ್ಯಯಾನದಲ್ಲಿನ ಪ್ರಮುಖ ಹೆಜ್ಜೆಗುರುತಾಗಿದೆ.

ಕವಿಯು ಸ್ವತಂತ್ರವಾಗಿ ಬೆಳೆಯುತ್ತಿರುವ ಸೂಚನೆಗಳನ್ನು ಈ ಸಂಕಲನದಲ್ಲಿ ಕಾಣಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಹೊಸ ಬಾಳಿಗೆ ಬೇಕಾದ ಆದರ್ಶವಾದದ ಭಾವ ಈ ಸಂಕಲನದ ಕವಿತೆಗಳ ವಿಶೇಷ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books