ಆಕರಗಳು ಶೋಧ-ಪರಿಶೋಧ

Author : ಕೆ. ರವೀಂದ್ರನಾಥ

Pages 176

₹ 140.00




Year of Publication: 2018
Published by: ಶ್ರೀಸಿದ್ದಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ-585101

Synopsys

‘ಆಕರಗಳು ಶೋಧ-ಪರಿಶೋಧ’ ಡಾ.ಕೆ. ರವೀಂದ್ರನಾಥ ಅವರ ಸಂಶೋಧನ ಲೇಖನಗಳ ಸಂಕಲನ. ಸಂಶೋಧನ ಶಾಸ್ತ್ರಗಳನ್ನು ಶಾಸ್ತ್ರೀಯವಾಗಿ ವಿಶ್ಲೇಷಿಸಲು ಶಾಸ್ತ್ರಗಳೊಡನೆ ಸಾಹಿತ್ಯದ ಅಧ್ಯಯನದಿಂದ ಮಾತ್ರ ಸಾಧ್ಯ. ಪ್ರಾಚೀನ ಗ್ರಂಥಗಳ ತಲಸ್ಪರ್ಶಿ ಅಧ್ಯಯನದ ಹಿನ್ನೆಲೆ ಇದ್ದರಷ್ಟೆ ಯಾವುದೇ ಕಾವ್ಯಕೃತಿಯ ಒಡಲನ್ನು ಬಗೆದು ಗರ್ಭವನ್ನು ಶೋಧಿಸುವ ಕಾರ್ಯ ಸಫಲಗೊಂಡೀತು.

ಪ್ರಸ್ತುತ ಸಂಶೋಧನ ಲೇಖನಗಳ ಸಂಪುಟವಾಗಿ ಹೊರಬರುತ್ತಿರುವ ಆಕರಗಳು: ಶೋಧ-ಪರಿಶೋಧವನ್ನು ಪರಾಮರ್ಶಿಸಿದಾಗ ವ್ಯಕ್ತಪಡಿಸುವ ಅನಿಸಿಕೆಯೇ ಇದು. ಸಾಹಿತ್ಯ-ಭಾಷೆ-ವಿಷಯಗಳ ಆದ್ಯಂತ ಅಧ್ಯಯನದ ತರುವಾಯ ವಿಷಯವನ್ನು ಹಲವು ನಿಟ್ಟಿನಿಂದ ವಿಮರ್ಶಿಸಲು ಡಾ. ಕೆ. ರವೀಂದ್ರನಾಥ ಅವರಿಗೆ ಇಲ್ಲಿ ಸಾಧ್ಯವಾಗಿರುವುದು ವಿಷಯದ ಆಯ್ಕೆ, ಅದನ್ನು ಪ್ರವೇಶಿಸಲು ಬೇಕಾದ ಸಿದ್ಧತೆ, ವ್ಯವಸ್ಥಿತ ನಿರೂಪಣೆ, ಸಮರ್ಥನೆಯ ವಿಧಾನ, ನಿರ್ಣಯಸಾಮರ್ಥ್ಯ-ಇವುಗಳ ಅನುಸರಣೆಯಿಂದಲೂ ಈ ಕೃತಿಯು ಗಮನಾರ್ಹ. 

About the Author

ಕೆ. ರವೀಂದ್ರನಾಥ
(22 July 1962)

ಡಾ. ಕೆ. ರವೀಂದ್ರನಾಥ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ (1990) ಪದವಿ ಪಡೆದಿರುವ ಅವರು ’ಕನ್ನಡ ಸಾಹಿತ್ಯ - ಮಠ ಮಾನ್ಯಗಳ ಸೇವೆ’ ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಪಿಎಚ್. ಡಿ ಪದವಿ (1996) ಪಡೆದಿದ್ದಾರೆ. ಹಳಕನ್ನಡ -ನಡುಕನ್ನಡ ಸಾಹಿತ್ಯ , ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರ, ಗ್ರಂಥ ಸಂಪಾದನೆ, ಸಂಸ್ಕ್ರತಿ ಅಧ್ಯಯನಗಳು, ವಚನ ಸಾಹಿತ್ಯ  ಅವವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳು.ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರುವ ಮುನ್ನ ಅವರು ಬಳ್ಳಾರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿದ್ದರು. ಸಂಶೋಧನೆ: ಮಾನ್ಯ , ಕನ್ನಡ ದಾಖಲು ಸಾಹಿತ್ಯ,  ಆಗ್ನಿದಿವ್ಯ ...

READ MORE

Related Books