ಆಲದ ಮರ

Author : ಬಸವರಾಜ್ ತೂಲಹಳ್ಳಿ

Pages 380

₹ 250.00




Year of Publication: 2012
Published by: ನಿವೇದಿತ ಪ್ರಕಾಶನ
Address: ನಂ. 3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು -28
Phone: 8050 917296

Synopsys

ಲೇಖಕ  ಟಿ. ಬಸವರಾಜ್ ತೂಲಹಳ್ಳಿ ಅವರ ಕೃತಿ ’ಆಲದ ಮರ.’ ಸತ್ಯದರ್ಶನಕ್ಕಾಗಿ ಮತ್ತೆ ಮತ್ತೆ ಚಿಂತನ ಹಾಗೂ ಮಂಥನಗಳನ್ನು ನಡೆಸಿಕೊಳ್ಳುವ ಹಲವು ಪ್ರಯತ್ನಗಳ ಫಲವಾಗಿ ಈ ಕೃತಿ ಹೊರಬಂದಿದೆ.

ಅವರ ಬೇರೆ ಬೇರೆ ವಿಷಯಗಳ ಸ್ಥಾಪಿತ ಸತ್ಯಗಳ ಮರುಪರಿಶೀಲನೆಯನ್ನು ಇಲ್ಲಿರುವ 16 ಪ್ರಬಂಧಗಳು ಓದುಗರಿಗೆ ಪರಿಚಯಿಸುತ್ತದೆ.

ಈ ಪ್ರಬಂಧಗಳ ಸಂಕಲನವನ್ನು ಅವರು ‘ಆಲದ ಮರ’ ಎಂದು ಹೆಸರಿಸಿದ್ದರೂ ಅದರಡಿಯಲ್ಲೇ ಇದನ್ನು ‘ಪ್ರಾಚೀನ ಸಂಸ್ಕೃತಿ ಸಂಕಥನ’ಎಂಬ ಸಹಶೀರ್ಷಿಕೆಯನ್ನೂ ಸೇರಿಸಿದ್ದಾರೆ. ಅದರಲ್ಲಿ ಲೇಖಕರು ಸೂಚಿಸಿರುವಂತೆ ಈ ಲೇಖನಗಳೆಲ್ಲಾ ಸಂಸ್ಕೃತಿ ಚಿಂತನೆಯನ್ನು ಪ್ರಧಾನವಾಗಿ ಕೇಂದ್ರೀಕರಿಸಿದವಾದರೂ ಅವುಗಳಲ್ಲಿ ಚಿಂತನೆಯ ಜೊತೆಗೆ ಪರಿಶೀಲನೆ-ವಿಶ್ಲೇಷಣೆಗಳೂ ಸೇರಿವೆ.

 

About the Author

ಬಸವರಾಜ್ ತೂಲಹಳ್ಳಿ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನಿಸಿದರು. ಉಪಜೀವನಕ್ಕೆ ಕಿರಾಣಿ ಅಂಗಡಿ ನಿರ್ವಹಣೆಯ ಜತೆಗೇ ಮೈಸೂರು ವಿಶ್ವವಿದ್ಯಾಲಯದಿಂದ ’ಐ.ಸಿ.ಸಿ ಅಂಡ್ ಸಿ.ಇ’ ಮೂಲಕ ಪದವಿ ನಂತರ 1992 ರಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. 1992 ರಿಂದ ದಾವಣಗೆರೆ, ಹರಪನಹಳ್ಳಿ, ಕೊಟ್ಟೂರುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಡಿಸೆಂಬರ್‍ ನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರದ ದ.ರಾ.ಮ ಸರಕಾರೀ ...

READ MORE

Related Books