ಆಲೋಕನ

Author : ಎಂ. ಎಚ್. ಕೃಷ್ಣಯ್ಯ

Pages 203

₹ 130.00




Year of Publication: 2006
Published by: ವಸಂತ ಪ್ರಕಾಶನ
Address: #10, ತುಲಸಿತೋಟ, ಬೆಂಗಳೂರು-560053
Phone: 9844098336

Synopsys

’ಅಲೋಕನ’ ಕೃತಿಯು ಎಂ.ಎಚ್. ಕೃಷ್ಣಯ್ಯ ಅವರು ಬರೆದಿರುವ ಸಾಹಿತ್ಯಿಕ ಹಾಗೂ ಕಲೆಯ ಕುರಿತ ವಿಮರ್ಶಾತ್ಮಕ ಪ್ರಬಂಧವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು, ‘ಪ್ರೊ. ಎಂ. ಎಚ್. ಕೃಷ್ಣಯ್ಯನವರು ಸಾಹಿತ್ಯ ವಿಮರ್ಶೆಯನ್ನು ಬರೆಯಲಿ, ಕಲೆಯ ವಿಮರ್ಶೆಯನ್ನೇ ಬರೆಯಲಿ, ಓದುಗರ ಮಟ್ಟಿಗೆ ಅವರ ಬರಹ ಪ್ರತಿಫಲದಾಯಕ. ಅವರದು ಸ್ಪಷ್ಟವಾದ, ಖಚಿತವಾದ, ಸಾಧಾರಣವಾದ ವಿಮರ್ಶೆ. ಸಾಹಿತ್ಯದಲ್ಲಿ, ಕಲೆಯಲ್ಲಿ ವಿಸ್ತಾರವಾದ ಅಧ್ಯಯನವನ್ನು ಮಾಡಿದ್ದಾರೆ. ಅವರ ವಿಮರ್ಶೆಗಳು ಕೂಲಂಕಷ ಮತ್ತು ಸಮಗ್ರವಾಗಿವೆ. ಅವರಿಗೆ ಪರಂಪರೆಯಲ್ಲಿ ಬಹಳ ಆಸಕ್ತಿ. ಸಾಮಾನ್ಯವಾಗಿ ಯಾವುದೇ ಸಾಹಿತಿ ಅಥವಾ ಕಲಾವಿದನನ್ನು ಕುರಿತು ಬರೆಯುವಾಗ ಪರಂಪರೆಯೊಡನೆ ಅವನ ಸಂಬಂಧವನ್ನು ಗಮನಿಸುತ್ತಾರೆ. ಅವರ ವಿಮರ್ಶೆಯ ಇನ್ನೊಂದು ಲಕ್ಷಣ ನಿಖರತೆ ಮತ್ತು ವಿಶ್ಲೇಷಣೆಗಳ ಸಂಗಮವಾಗಿದೆ. ಗಣ್ಯ ಕಲಾತಜ್ಞರಾಗಿರುವ ಅವರು ಕಲೆಗಳನ್ನು ಕುರಿತ ಹಲವು ಲೇಖನಗಳು ಬರೆದಿದ್ದು, ಆ ಲೇಖನಗಳು ಈ ಸಂಗ್ರಹದಲ್ಲಿ ಸೇರಿವೆ. ಅವರು ಬಹು ಆಸಕ್ತಿಯಿಂದ ಆಳವಾಗಿ ಅಧ್ಯಯನ ಮಾಡಿದವರು . ಅವರ ಅಧ್ಯಯನದ ಕುರಿತ ವಿಚಾರಗಳು ಇಲ್ಲಿ ಸೇರಿಕೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.

ಈ ಕೃತಿಯಲ್ಲಿ 19 ಶೀರ್ಷಿಕೆಗಳಿದ್ದು, ಅವು, ವಿ.ಸೀ. ಸಾಹಿತ್ಯಾಲೋಕನ, ವಿ.ಸೀ: `ಪಾಶ್ಚಾತ್ಯ ನಾಟಕ ವಿವೇಚನೆಗಳು, ಜಿ. ವೆಂಕಟಸುಬ್ಬಯ್ಯ: ಪರಾಮರ್ಶನ, ಕೆ. ನರಸಿಂಹಮೂರ್ತಿ: `ಅಭಿವ್ಯಕ್ತಿ, ಬಿ.ಸಿ. ರಾಮಚಂದ್ರ ಶರ್ಮ: ಪ್ರತಿಭಾ ಸಂದರ್ಶನ, ಪ್ರಭುಶಂಕರ: ಲಹರಿ, ಅ.ರಾ.ಮಿತ್ರ: `ಸಮಗ್ರ ಲಲಿತ ಪ್ರಬಂಧಗಳು', ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ: ಸಾಹಿತ್ಯ ಸನ್ನಿದಿ, ಟಿ.ಎನ್. ಮಹದೇವಯ್ಯ: ಕಾಗೆ ಮತ್ತು ಗಿರಣಿಗಳು, ಮುಕ್ತ ಮನಸ್ಸಿನ ಕವಿ, ಕೆ.ಎಸ್. ನಿಸಾರ್‌ ಅಹಮದ್‌: ಮುಚ್ಚು ಅಂಗಡಿಯನ್ನು, ಸಿ.ವಿ. ವತ್ಸಲಾದೇವಿ: ವ್ಯೂಹ ಮತ್ತು ಇತರ ಕತೆಗಳು, ಕನ್ನಡ ಸಂಸ್ಕೃತಿಯ ಅಧ್ಯಯನ(ಐದು ಪ್ರಶ್ನೆಗಳು), ಉನ್ನತ ಶಿಕ್ಷಣದಲ್ಲಿ ಕನ್ನಡ, ಜನಪ್ರಿಯ ಕಲೆ, ದೃಶ್ಯ ಕಲೆಯ ಓಲವು-ನಿಲುವುಗಳು, ರೋಡಿನ್ ನ ಶಿಲ್ಪಕಲೆ, ಕುವೆಂಪು ಸಾಹಿತ್ಯ ಚಿತ್ರಸಂಪುಟ, ಕಾರಂತರ ಕಲಾಸಾಹಿತ್ಯವನ್ನು ಒಳಗೊಂಡಿದೆ.

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books