ಪರಿಸರವಾದಿ ನಾಗೇಶ ಹೆಗಡೆ ಅವರು ವಿವಿಧ ವಿಷಯಗಳ ಕುರಿತು ಬರೆದ ಲೇಖನಗಳ ಸಂಗ್ರಹ ಕೃತಿ-ಆನಂದಾಮೈಡ್. ವಿಜ್ಞಾನ-ತಂತ್ರಜ್ಞಾನ ಸುದ್ದಿ ವಿಶ್ಲೇಷಣೆ ಎಂಬ ಉಪಶೀರ್ಷಿಕೆಯ ಈ ಕೃತಿಯಲ್ಲಿ ಒಟ್ಟು 35 ವಸ್ತು ವೈವಿಧ್ಯತೆಯ ಲೇಖನಗಳನ್ನು ಸಂಕಲಿಸಲಾಗಿದೆ. ದೈವತ್ವದ ಕಡೆ ದೈತ್ಯ ಹೆಜ್ಜೆ, ದೇಶದ ಖ್ಯಾತಿ ದೂಳುಪಾಲು, ನೀರಿಗಾಗಿ ಹಿಮಖಂಡಕ್ಕೆ ಹಗ್ಗ, ಕಲ್ಪಿತ ಕತೆಯನ್ನೂ ಮೀರುವ ಮಿದುಳು, ಊಹೆಗೂ ಮೀರುವ ವುಹಾನ್ ವ್ಯೂಹ, ಭೂದಿನದಂದು ಗೇಯಾ ಮಾತೆಯ ನೆನಪು, ಕಾಂಗ್ರೆಸ್ ಕಳೆಗೂ ಕೊರಾನಾಕ್ಕೂ ತಾಳಮೇಳ, ಒಂದು ಸುಂದರ ಕನಸಿನ ಕೊನೆ, ಕೋವಿಡ್ ಬದಿಗಿಟ್ಟು ಸಿವಿಡಿ ನೋಡೋಣವೆ?, ಭಯಬಿದ್ದಾಗ ಜ್ವರ ಏಕೆ ಬರುತ್ತದೆ?, ಭೂಮಿತಾಯಿ ಶರ್ಬತ್ ಮಾಡುತ್ತಿದ್ದಾಳೆ, ಮರೀಚಿಕೆಯೂ ಕಾಣದಷ್ಟು ಮಬ್ಬುಮಬ್ಬು, ಗೀತಾಂಜಲಿ ಎಂಬ ಬೆಳಕಿನ ಬಾಲೆ...ಹೀಗೆ ವಿವಿಧ ಲೇಖನಗಳಿವೆ. ಈ ಎಲ್ಲವೂ ಪ್ರಜಾವಾಣಿಯ ‘ವಿಜ್ಞಾನ ವಿಶೇಷ ಅಂಕಣ ಬರಹ’ಗಳಾಗಿವೆ. ಕಳೆದ ಎರಡು ವರ್ಷಗಳಲ್ಲಿ (2019-2020) j ಜಗತ್ತಿನ ಕೆಲವು ಪ್ರಮುಖ ವಿದ್ಯಮಾನಗಳನ್ನು ಕನ್ನಡದ ಕನ್ನಡಕದ ಮೂಲಕ ನೋಡಿ ವ್ಯಾಖ್ಯಾನಿಸಲು ಹಾಗೂ ಮಧ್ಯೆ ಮಧ್ಯೆ ಕೆಲವು ಲೇಖನಗಳು ತಮ್ಮ ಅಂಕಣ ಬರಹದ ವಿಸ್ತರಣೆಯ ರೂಪದಲ್ಲಿ ಫೇಸ್ ಬುಕ್ ನಲ್ಲಿ ಬಂದಿದ್ದು , ಅವುಗಳನ್ನು ಸಹ ಈ ಸಂಕಲನದಲ್ಲಿ ಸೇರಿಸಿದ್ದಾಗಿ ಲೇಖಕರು ಹೇಳಿದ್ದಾರೆ. ಮಾತ್ರವಲ್ಲ; ನಿಸರ್ಗವನ್ನು ಬಗ್ಗು ಬಡಿದು ನಾಳಿನ ಪೀಳಿಗೆಯ ಭವಿಷ್ಯಕ್ಕೂ ಬೆಂಕಿಯಿಟ್ಟು, ಇಂದಿನವರ ಚಿಲುಮೆ ಉರಿಯುತ್ತಿದೆ. ಈ ಸಂಕಲನದ ಬಹುತೇಕ ಎಲ್ಲ ಲೇಖನಗಳಲ್ಲೂ ಅದರ ಛಾಯೆ ಇದೆ. ಕೆಲವೆಡೆ ಢಾಳಾಗಿ, ಇನ್ನೂ ಕೆಲವೆಡೆ ಮುಗುಮ್ಮಾಗಿ ಅದು ಇದೆ’ ಎಂದೂ ತಮ್ಮ ಲೇಖನಗಳ ಸ್ವರೂಪವನ್ನು ಸ್ಪಷ್ಟಪಡಿಸಿದ್ದಾರೆ..
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE