ಆನೆ ಬಂತೊಂದಾನೆ

Author : ಕಂನಾಡಿಗಾ ನಾರಾಯಣ

Pages 40

₹ 30.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಪಶ್ಚಿಮ ಘಟ್ಟಗಳ ಪೂರ್ವದ ಅಂಚಿನಲ್ಲಿರುವ ಆನೆಕೆರೆ ಅರಣ್ಯದ ಆನೆಗಳು ಮರಿಗೆ ಏನೋ ತೊಡಕುಂಟಾಗುತ್ತದೆ. ಆಗ ಕಾಡುಪ್ರೇಮಿ ಬಡ ರೈತನೊಬ್ಬ ಆಕಸ್ಮಿಕವಾಗಿ ಆನೆ ಮರಿಯನ್ನು ಆ ರೈತನೇ ಸಲುಹಬೇಕಾಗಿ ಬರುತ್ತದೆ. ನಂತರ ಆನೆಗಳ ಸಹವಾಸದಿಂದ ಆತನಿಗೆ ‘ಆನೆಪ್ಪ’ ಎಂದೇ ಹೆಸರಾಗುತ್ತದೆ. ಆದರೆ ಆನೆಮರಿ ಎಲ್ಲರ ಕಣ್ಮಣಿಯಾಗಿ ದೊಡ್ಡದಾಗುತ್ತಾ ಹೋದಂತೆ ಅಲ್ಲಿನ ಮಠದ ಸ್ವಾಮಿಗಳ, ಸರ್ಕಸ್‌ನವರ ಕಣ್ಣು ಬಿದ್ದು ಹೇಗಾದರೂ ಆನೆಮರಿಯನ್ನು ವಶಪಡಿಸಿಕೊಳ್ಳಲು ಬರುತ್ತಾರೆ. ಇಂತಹ ವಿಪತ್ತಿನಲ್ಲಿ ಆನೆಪ್ಪ ಏನು ಮಾಡುತ್ತಾನೆ ಎಂಬುದೇ ಈ ಮಕ್ಕಳ ಕಾದಂಬರಿಯ ಕತಾ ಹಂದರ. ಪಶ್ಚಿಮ ಘಟ್ಟಗಳ ಪೂರ್ವದ ಅಂಚಿನ ಪರಿಸರ ಹಾಗೂ ಅಲ್ಲಿನ ಮನೋಹರ ವೈವಿಧ್ಯತೆಯ ವಿವರಗಳು ಮಕ್ಕಳನ್ನು ಕುತೂಹಲಿಗಳನ್ನಾಗಿಸುತ್ತದೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books