ಆಂಗ್ಲ ಸಾಹಿತ್ಯ ನೀಡಿದ ಸ್ಫೂರ್ತಿ

Author : ವಿ.ಕೃ. ಗೋಕಾಕ (ವಿನಾಯಕ)

Pages 40

₹ 35.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, 2ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

’ ಆಂಗ್ಲ ಸಾಹಿತ್ಯ ನೀಡಿದ ಸ್ಫೂರ್ತಿ ’ ಕವಿ, ವಿಮರ್ಶಕ ವಿ. ಕೃ ಗೋಕಾಕ ಅವರು ಸಂಪಾದಿತ ಕೃತಿ. ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು 1972ರಲ್ಲಿ ನೀಡಿದ ಉಪನ್ಯಾಸವಿದು. ವಿದ್ವಾಂಸ ವಿ.ಕೃ.ಗೋಕಾಕ ಅವರು ಸಹ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗಿದ್ದು, ಅಲ್ಲಿಯ ಸಾಹಿತ್ಯ-ಸಂಸ್ಕೃತಿಯ ಅಧ್ಯಯನದ ಫಲವಾಗಿ ಕನ್ನಡ ಸೇರಿದಂತೆ ಭಾರತೀಯ ಇತರೆ ಭಾಷೆಗಳ ಮೇಲೆ ಪ್ರಭಾವ ಬೀರಿದ್ದರ ಕುರಿತು ತೌಲನಿಕ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಅವರು ತಮ್ಮ ಒಳನೋಟದಿಂದ ಇಲ್ಲಿಯ ವಿಷಯ ವಸ್ತುವನ್ನು ವಿಮರ್ಶಾ ದೃಷ್ಟಿಯಿಂದ ವಿಶ್ಲೇಷಿಸಿದ್ದೂ ಈ ಕೃತಿಯ ಹೆಗ್ಗಳಿಕೆ. 

ಚಿಂತಕ ಡಾ. ಡಿ.ವಿ. ಗುಂಡಪ್ಪ ಅವರು ಕೃತಿಗೆ ಮುನ್ನುಡಿ ಬರೆದು ‘ಆಂಗ್ಲ ಸಾಹಿತ್ಯ-ನಮ್ಮ ಜನಕ್ಕೆ ತುಂಬ ಮುಖ್ಯವಾದದ್ದು. ಈ ದೇಶದ ವಿದ್ಯಾಭ್ಯಾಸ ಕ್ರಮದಲ್ಲಿಯೂ, ಜನಜೀವನದಲ್ಲಿಯೂ ಇಂಗ್ಲಿಷ್ ಭಾಷೆಗೆ ಯಾವ ಸ್ಥಾನವಿರಬೇಕೆಂಬ ವಿಷಯದಲ್ಲಿ ಬಹುಮಂದಿಗೆ ಮನಸ್ಸು ಕದಲಿ ಅನಿಶ್ಚಿತವಾಗಿರುವಾಗ, ಶ್ರೀಮಾನ್ ಗೋಕಾಕರವರಂಥ ಮಹಾವಿದ್ವಾಂಸರೂ, ವಿಚಾರವಂತರೂ ಕೊಟ್ಟಿರುವ ಅಭಿಪ್ರಾಯಗಳು ಒಂದು ನಿಶ್ಚಯಕ್ಕೆ ಬರುವುದರಲ್ಲಿ ಜನಕ್ಕೆ ಸಹಾಯವಾದಾವು ಎಂಬುದರಲ್ಲಿ ಸಂದೇಹವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

(ಈ ಮೊದಲು ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯು 1973ರಲ್ಲಿ ಜನೋಪಯುಕ್ತ ಗ್ರಂಥಮಾಲೆಯಡಿ ಪ್ರಕಟಿಸಿತ್ತು ಪುಟ: 32, ಹಾಗೂ ಬೆಲೆ: 1 ರೂ. ಇತ್ತು.) 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books