ಆಪ್ತವಲಯದಲ್ಲಿ ಅಮೆರಿಕನ್ನಡಿಗ ಎಚ್.ವೈ. ರಾಜಗೋಪಾಲ್

Author : ಮೈ.ಶ್ರೀ. ನಟರಾಜ

Pages 252

₹ 250.00




Year of Publication: 2019
Published by: ಕನ್ನಡ ಸಾಹಿತ್ಯ ರಂಗ
Address: ಯು.ಎಸ್.ಎ.

Synopsys

ಲೇಖಕರಾದ ಡಾ. ಮೈ.ಶ್ರೀ ನಟರಾಜ ಹಾಗೂ ತ್ರಿವೇಣಿ ಶ್ರೀನಿವಾಸರಾವ್ ಅವರ ಸಂಯುಕ್ತವಾಗಿ ಚಿಂತಕ ಎಚ್.ವೈ. ರಾಜಗೋಪಾಲ್ ಅವರ ವ್ಯಕ್ತಿತ್ವದ ಎತ್ತರವನ್ನು ಕಟ್ಟಿಕೊಟ್ಟ ಕೃತಿ. ಅಮೆರಿಕೆಯಲ್ಲಿದ್ದರೂ ಎಚ್.ವೈ. ರಾಜಗೋಪಾಲ್ ಅವರು ಅಪ್ಪಟ ಕನ್ನಡಿಗರಾಗಿ ಬದುಕಿದ್ದು ಮಾತ್ರವಲ್ಲ; ಇತರೆ ಕನ್ನಡಿಗರನ್ನು ಒಗ್ಗೂಡಿಸಿ, ನಾಡು-ನುಡಿಯ ಅಭಿಮಾನ ಬೆಳೆಸಿದವರು. ಅವರ ಸಂಪೂರ್ಣ ವ್ಯಕ್ತಿತ್ವದ ಚಿತ್ರಣ ನೀಡುವ ಕೃತಿ ಇದು.

About the Author

ಮೈ.ಶ್ರೀ. ನಟರಾಜ

ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...

READ MORE

Related Books