ಆರ್ತ

Author : ಗೀತಾ ಶೆಣೈ

Pages 110

₹ 150.00




Year of Publication: 2020
Published by: ಸೃಷ್ಟಿ ಪಬ್ಲಿಕೇಷನ್ಸ್
Address: # 121, 13ನೇ ಮುಖ್ಯರಸ್ತೆ, ಎಂ. ಸಿ. ಲೇಔಟ್, ವಿಜಯನಗರ, ಬೆಂಗಳೂರು
Phone: 9845096668

Synopsys

ಆರ್ತ-ಕೊಂಕಣಿ ಲೇಖಕಿ ಡಾ. ಜಯಂತಿ ನಾಯ್ಕ್. ಅವರ ಕಥೆಗಳನ್ನು ಲಖಕಿ ಗೀತಾ ಶೆಣೈ (ಗೀತಾ ಬಾಲಿ ನಾಯಕ್ ಪಿ.) ಅವರು ಕನ್ನಡೀಕರಿಸಿದ್ದಾರೆ. ಈ ಕಥೆಗಳಲ್ಲಿ ಗ್ರಾಮೀಣ ಮತ್ತು ನಗರ ಜೀವನದ ಶೈಲಿ, ಸ್ಥಳೀಯ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ಆಚರಣೆ ಮತ್ತು ಪದ್ಧತಿಗಳ ವಿವರ, ಹಳ್ಳಿಯ ಜನರ ಬಡತನ, ಅನಕ್ಷರತೆ, ಹಾಗೂ ಮೂಢನಂಬಿಕೆ, ಕಾಲಾನುಕ್ರಮದಲ್ಲಿ ನಶಿಸಿ ಹೋಗುತ್ತಿರುವ ನೆಲಸಂಸ್ಕೃತಿಯ ಕುರುಹುಗಳ ಕುರಿತಾದ ಕಾಳಜಿ, ಸ್ತ್ರೀಯ ಆಂತರಿಕ ಭಾವನೆಗಳು ಮತ್ತು ಅವಳಲ್ಲಿ ಮೂಡಿರಬಹುದಾದ ಬಿಡುಗಡೆಯ ಆಶಯ ಇತ್ಯಾದಿ ಗುರುತಿಸಬಹುದು. ವ್ಯಕ್ತಿಗತ ನೆಲೆಗಿಂತಲೂ ಸಾಮುದಾಯಿಕ ಪರಿಪ್ರೇಕ್ಷದ ಸಾಮಾಜಿಕ ಪಾತಾಳಿಯಲ್ಲಿ ಬದುಕನ್ನು ಕಾಣುವ ಅಪರೂಪದ ದರ್ಶನ ಇವರ ಕಥೆಗಳಲ್ಲಿ ಸಿಗುತ್ತದೆ.

 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books