ಆಸೆಯೇ ಅನಂತ

Author : ಸದ್ಗುರು (ಜಗ್ಗಿ ವಾಸುದೇವ)

Pages 145

₹ 145.00




Year of Publication: 2020
Published by: ಜೈಕೋ ಪಬ್ಲಿಷಿಂಗ್ ಹೌಸ್
Address: ಆರ್.ಕೆ. ಪುರಂ, ಬೆಂಗಳೂರು

Synopsys

ಖ್ಯಾತ ಧಾರ್ಮಿಕ ಪ್ರವಚನಕಾರ, ಗುರು ಸದ್ಗುರು (ಜಗ್ಗಿ ವಾಸುದೇವ) ಅವರು ರಚಿಸಿದ ಕೃತಿ-ಆಸೆಯೇ ಅನಂತ. ಬದುಕಿನ ಬಹುತೇಕ ದುಃಖಗಳಿಗೆ ಆಸೆಯೇ ಕಾರಣ. ಆಸೆಯನ್ನು ತೊರೆಯಲು ಬುದ್ಧ ಸೇರಿದಂತೆ ಇತರೆ ಧರ್ಮಗುರುಗಳು ಹೇಳಿದ್ದರೂ ಅದನ್ನು ಬಿಡಲಾಗುತ್ತಿಲ್ಲ. ಹೀಗಾಗಿ, ಬದುಕಿನಲ್ಲಿ ದುಃಖಗಳಿಂದ ಜನ ತುಂಬಿಹೋಗಿದ್ದಾರೆ. ಆದರೆ, ಸದ್ಗುರು ಹೇಳುತ್ತಾರೆ ‘ಆಸೆಯೇ ದುಃಖಕ್ಕೆ ಮೂಲ” ಎಂಬಂತಹ ತಿಳಿಗೇಡಿತನದ ಮಾತನ್ನು ಗೌತಮ ಬುದ್ಧನು ಹೇಳಿರಲು ಸಾಧ್ಯವಿಲ್ಲ. ಆಸೆಗಳನ್ನು ಬಿಡಬೇಕು ಎನ್ನುವುದೂ ಒಂದು ಆಸೆ ತಾನೆ! ಆಸೆ-ಬಯಕೆಗಳಿಲ್ಲದೆ ಬದುಕೇ ಸಾಧ್ಯವಿಲ್ಲ. ಆಸೆಗಳನ್ನೇ ಬಿಟ್ಟುಬಿಡುವುದು ಮರಣಕ್ಕೆ ಸಮಾನ, ಜೀವನಕ್ಕೆ ವಿರುದ್ಧವಾದುದು ಎನ್ನುತ್ತಾರೆ ಸದ್ಗುರು. ಮತ್ತೇ, ಅವರು ಹೇಳುವುದೆಂದರೆ ‘ಆಸೆಗಳನ್ನು ಇರಿಸಿಕೊಳ್ಳಿ, ಆದರೆ ಇದರಲ್ಲಿ ಕಂಜೂಸ್‌ತನ ಬೇಡ, ಎಲ್ಲದಕ್ಕೂ ಆಸೆಪಡಿ. ಆಸೆಗಳನ್ನೂ ಇಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಬೆಳೆಯಿರಿ. ಬೆಳೆಯುತ್ತಾ ಆಸೆಗಳನ್ನು ವಿಸ್ತರಿಸುತ್ತಾ ,ವಿಸ್ತರಿಸುತ್ತಾ ಅನಂತವನ್ನೇ ಆಶಿಸಿ. ಈ ಆಸೆಯನ್ನು ಈಡೇರಿಸಿಕೊಳ್ಳುವುದೇ ಜೀವನ. ಆಸೆಯೇ ಅನಂತ’ ಎಂದೂ ಸರಳೀಕರಿಸುತ್ತಾರೆ. ಸದ್ಗುರುವಿನ ಈ ವಿಚಾರಧಾರೆ ಮೊದಲ ಬಾರಿಗೆ ತಮಿಳಿನ ‘ಆನಂದ ವಿಕಟನ್’ ವಾರಪತ್ರಿಕೆಯಲ್ಲಿ ನಾಲ್ಕು ವರ್ಷ ಕಾಲ ಪ್ರಕಟವಾಯಿತು. ನಂತರ, ಕನ್ನಡದ ಸುಧಾ ವಾರಪತ್ರಿಕೆಯಲ್ಲೂ ಪ್ರಕಟವಾಯಿತು. ಆ ಲೇಖನಗಳನ್ನು ಸಂಗ್ರಹಿಸಿದ ಕೃತಿ ಇದು.

About the Author

ಸದ್ಗುರು (ಜಗ್ಗಿ ವಾಸುದೇವ)

.ಜಗ್ಗಿ ವಾಸುದೇವ ಅವರು ಜನಮಾನಸದಲ್ಲಿ ‘ಸದ್ಗುರು’ ಎಂದೇ ಖ್ಯಾತಿ. ಭಾರತೀಯ ಪರಂಪರೆ-ಸಂಸ್ಕೃತಿ, ಮಾನವ ಸ್ವಭಾವಗಳ ವ್ಯಾಖ್ಯಾನ, ಸಾಮಾಜಿಕ ಆಚರಣೆ-ಹಬ್ಬಗಳ-ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮದೇ ವಿಶಿಷ್ಟ ವೈಚಾರಿಕ ದೃಷ್ಟಿಕೋನದಿಂದ ಪ್ರವಚನಗಳನ್ನು ಹೇಳುವುದು ಇವರ ವ್ಯಕ್ತಿತ್ವದ ಪ್ರಮುಖ ಅಂಶ.  ಕೃತಿಗಳು: ಮರಣ,  ...

READ MORE

Related Books