ಆಶಯ ಆಕೃತಿ

Author : ಸಿ.ಎನ್. ರಾಮಚಂದ್ರನ್

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕನ್ನಡದ ಪ್ರಸಿದ್ಧ ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರ ವಿಮರ್ಶಾ ಸಂಕಲನ ಇದು. ಕೃತಿಯ ಕುರಿತು ಖ್ಯಾತ ಕವಿ ಎಚ್.ಎಸ್. ಶಿವಪ್ರಕಾಶರು ಆಡಿರುವ ಮಾತುಗಳು ಹೀಗಿವೆ: 

'ಡಾ. ಸಿ.ಎನ್. ರಾಮಚಂದ್ರನ್‌ರವರ ಆಳವಾದ ವಿದ್ವತ್ತು ನನ್ನಲ್ಲಿ ಗೌರವ ಮೂಡಿಸಿದೆ. ಶ್ರೀಯುತರು ಇಂಗ್ಲಿಷ್ ಮತ್ತು ಅಮೆರಿಕನ್ ಸಾಹಿತ್ಯದಲ್ಲಿ ಆಳವಾದ ಪರಿಶ್ರಮವುಳ್ಳವರು. ನಮ್ಮಲ್ಲಿ ವಿಮರ್ಶೆ ಬರೆಯಲು ತೊಡಗುವ ಬಹುತೇಕ ಇಂಗ್ಲಿಷ್ ಮೇಷ್ಟಗಳಿಗೆ ಸಾಧ್ಯವಾಗದ ತಿಳುವಳಿಕೆ ಈ ಕ್ಷೇತ್ರದಲ್ಲಿ ಸಿ.ಎನ್.ಆರ್. ಅವರಿಗಿದೆ. ಅಲ್ಲದೆ, ಸಾಂಪ್ರದಾಯಿಕ ವಿದ್ವತ್ತು ಮತ್ತು ಸಂಸ್ಕೃತ ಪರಂಪರೆಯ ಪರಿಚಯ ಸದಾ ಅವರ ವಿಚಾರಗಳ ಬೆಂಬಲಕ್ಕಿದೆ. ಆಧುನಿಕ ಕನ್ನಡ ಸಾಹಿತ್ಯದ ಓದಿನ ಜೊತೆಗೆ ಅವರು ಆಧುನಿಕ ಪೂರ್ವ ಕನ್ನಡ ಪರಂಪರೆಯ ಬಗ್ಗೆಯೂ ಗಂಭೀರವಾಗಿ ಓದನ್ನು ಹೊಂದಿದವರು. ಜೊತೆಗೆ ಸಾಹಿತ್ಯವನ್ನು ಕೇವಲ ಶಬ್ಬ ಲೋಲುಪವಾದ ಸರತಿಮ ಕಲೆಯೆಂದು ತಿಳಿಯದೆ ಅದರ ಸೈದ್ದಾಂತಿಕ, ಸಾಮಾಜಿಕ ಮತ್ತು ರಾಜಕೀಯ ವಾಸನೆಯನ್ನು ಹಿಡಿಯುವ ಗುಣ ಅವರಿಗಿದೆ. ಈ ಅಪರೂಪವಾದ ತಯಾರಿ ಮತ್ತು ಆಸಕ್ತಿಗಳು ಸಾಹಿತ್ಯವನ್ನು ಕುರಿತ ಅವರ ಬರವಣಿಗೆಗಳಿಗೆ ವಿಶೇಷವಾದ ಚಹರೆಯೊಂದನ್ನು ನೀಡಿವೆ. ಸಾಂಪ್ರದಾಯಕವೆಂದಾಗಲಿ ನವ್ಯವೆಂದಾಗಲಿ, ನವೋತ್ತರವೆಂದಾಗಲಿ ಸರಳವಾಗಿ ವರ್ಗಿಕರಿಸಲಾಗದ ಚಿಂತನೆ ಮತ್ತು ಬರಹಗಳ ಮಾದರಿ ಈ ಸಂಗ್ರಹದ ತಳಹದಿ.' 

About the Author

ಸಿ.ಎನ್. ರಾಮಚಂದ್ರನ್

ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...

READ MORE

Related Books