ಆತ್ಮಚರಿತ್ರೆಯ ಕೊನೆಯ ಪುಟ

Author : ಎಸ್. ದಿವಾಕರ್‌

Pages 40

₹ 25.00




Year of Publication: 2021
Published by: ಲಿಪಿ ಪ್ರಕಾಶನ
Address: ಬೆಂಗಳೂರು

Synopsys

‘ಆತ್ಮಚರಿತ್ರೆಯ ಕೊನೆಯ ಪುಟ’ ಕೃತಿಯು ಎಸ್. ದಿವಾಕರ್ ಅವರ ಕವನಗಳ ಕುರಿತ ಲೇಖನ ಸಂಕಲನವಾಗಿದೆ. ಕಾಂತವರ ಕನ್ನಡ ಸಂಘದ ಕವಿ ಮುದ್ದಣ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಎಸ್. ದಿವಾಕರ್ ಅವರ ಬರಹಗಳ ಸಂಕಲನ "ರೂಪ ರೂಪಗಳನು ದಾಟಿ' ಕೃತಿಗೆ ಬರೆದ ಪುಸ್ತಾವನೆಯಿಂದ ಆಯ್ಕೆ, ಅವರ ಕವನಗಳ ಕುರಿತ ಲೇಖನದ ಭಾಗ ಇಲ್ಲಿದೆ. ಕವನಗಳ ಬಗ್ಗೆ, ಬರೆಯಬಾರದು, ಅವುಗಳನ್ನು ಸುಮ್ಮನೇ ಅನುಭವಿಸಬೇಕು. ಅಲ್ಲಿ ಬಳಕೆಯಾದ ಶಬ್ದಗಳ, ಆ ಶಬ್ದ ಸಂಕಲನದ ಕಂಪನ ವಿಸ್ತಾರವೇನಿದೆ ಅದಕ್ಕೆ ಅರ್ಥದ ಸೂತಕ ಹಿಡಿಸುವುದು ತಪ್ಪು. ಕಿ.ರಂ.ನಾಗರಾಜ್ ಬೇಂದ್ರೆಯವರ ಬಗ್ಗೆ ಮಾತನಾಡುತ್ತ "ಕವಿಯ ಕಲಸ ಅರ್ಥದ ಬಂಧನದಿಂದ ಮಾತನ್ನು ಪಾರು ಮಾಡುವುದು" ಎಂದಿದ್ದರು, ಒಂದು ಅನುಭವದ ಸಂವೇದನೆಗಳನ್ನು ಭಾಷೆಯಲ್ಲಿ ದಾಟಿಸುವ, ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯ ಸಂಭವನೀಯತೆಯನ್ನು ಧ್ಯಾನಿಸಿ, ಅದರ ವಿಧಿ ವಿಧಾನದ ಬಗ್ಗೆ ಆಳವಾಗಿ ಯೋಚಿಸಿ, ವಿಶೇಷ ಎಚ್ಚರದಿಂದ ಅದನ್ನು ಆಗುಮಾಡಿದವರು. 'ಆತ್ಮಚರಿತ್ರೆಯ ಕೊನೆಯ ಪುಟ' ಎಂಬ ಹೆಸರಿನ ಒಂದೇ ಒಂದು ಸಂಕಲನ ಇದರಲ್ಲಿ ಒಟ್ಟು ಇಪ್ಪತ್ತಾರು ಕವನಗಳಿವೆ. ಇಲ್ಲಿ ಕೂಡಮಾಡಿರುವ ಆರು ಕವನಗಳು ಈ ಸಂಕಲನದಿಂದ ಆರಿಸಿದವು ಕೊನೆಯ ಎರಡು ಕವನಗಳು ಇತ್ತೀಚಿನ ರಚನೆಗಳಾಗಿವೆ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books