ಆಯಗಾರರು ಮತ್ತು ಜಾಗತೀಕರಣ

Author : ಧನವಂತ ಹಾಜವಗೋಳ

Pages 128

₹ 100.00




Year of Publication: 2017
Published by: ಮಹಾದೇವಿ ಪ್ರಕಾಶನ
Address: ಧಾರವಾಡ

Synopsys

ಡಾ. ಧನವಂತ ಹಾಜವಗೋಳ (ಡಿ.ಜಿ. ಹಾಜವಗೋಳ) ಅವರ ಕೃತಿ-ಆಯಗಾರರು ಮತ್ತು ಜಾಗತೀಕರಣ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದಕ್ಕೆ ಸಂಬಂಧಿಸಿದ ಒಟ್ಟು 12 ಸಂಪ್ರಬಂಧಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ. 5 ಸಂಪ್ರಬಂಧಗಳು ಭಾಷಾ ವಿಜ್ಞಾನಕ್ಕೆ ಸಂಬಂಧಿಸಿವೆ. ದಲಿತ ಸಾಹಿತ್ಯ ಭಾಷೆ, ಜನಪದ ಭಾಷೆ, ಕನ್ನಡ ಪರಿಭಾಷೆ ಮತ್ತು ಪದಕೋಶ, ಜಮಖಂಡಿ ಪ್ರದೇಶದ ಕೆಳ ಸಮುದಾಯದ ಭಾಷೆ, ಅಡ್ಡಹೆಸರು-ಈ ಕುರಿತು ಮಾಹಿತಿಯೂ ಒಳಗೊಂಡಿದೆ. ಆಯಗಾರರು ಮತ್ತು ಜಾಗತೀಕರಣ, ಜನಪದ ಮಹಾಕಾವ್ಯಗಳು, ದಲಿತ ಚಳವಳಿ, ರಾಷ್ಟ್ರನಾಯಕ ಡಾ. ಬಿ.ಆರ್. ಬಾಬಾಸಾಹೇಬ ಅಂಬೇಡ್ಕರ್, ಕನ್ನಡ ಜಾಗತೀಕರಣ, ಸಾಂಸ್ಕೃತಿ ಪರಂಪರೆ, ಅಲಕ್ಷಿತ ವಚನಕಾರರು ಹೀಗೆ ವಿವಿಧ ಆಧ್ಯಾಯಗಳಿವೆ. ಸಾಹಿತಿ ಡಾ. ಜೆ.ಎಂ. ನಾಗಯ್ಯ ಅವರು ಕೃತಿಗೆ ಬೆನ್ನುಡಿ ಬರೆದು ‘ಸಾಹಿತ್ಯ-ಸಂಸ್ಕೃತಿ ಅಧ್ಯಯನದ ವಿದ್ಯಾರ್ಥಿಗಳಿಗೆ ಈ ಕೃತಿಯು ಹೊಸ ಹೊಸ ಸಂಗತಿಗಳನ್ನು ನಿರೂಪಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಧನವಂತ ಹಾಜವಗೋಳ

ಲೇಖಕ ಡಾ. ಧನವಂತ ಹಾಜವಗೋಳ (ಡಿ.ಜಿ. ಹಾಜವಗೋಳ) ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದವರು. ಎಂ.ಎ, ಎಂ.ಫಿಲ್, ಪಿ ಎಚ್. ಡಿ ಹಾಗೂ ಬಿ.ಇಡಿ ಪದವೀಧರರು. ಮುಳಗುಂದ ನಾಡು: ಒಂದು ಅಧ್ಯಯನ-ಇವರ ಪಿಎಚ್.ಡಿ. ಮಹಾಪ್ರಬಂಧ. ಪ್ರಸ್ತುತ, ಕರ್ನಾಟಕ ವಿಶ್ವ ವಿದ್ಯಾಲಯದ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರು. ಕೃತಿಗಳು: ಆಯಗಾರರು ಮತ್ತು ಜಾಗತೀಕರಣ (ಸಂಪ್ರಬಂಧಗಳ ಸಂಕಲನ), ಮುಳಗುಂದ ನಾಡು: ಒಂದು ಅಧ್ಯಯನ (ಪಿಎಚ್.ಡಿ. ಮಹಾಪ್ರಬಂಧ), ಶೋಧ-ಪ್ರತಿಶೋಧ (ಸಂಶೋಧನಾ ಪ್ರಬಂಧಗಳು), ವಿರಾಟ ಪರ್ವ: ಸಾಂಸ್ಕೃತಿಕ ನೆಲೆ, ಪುಸ್ತಕಾವಲೋಕನ (ಲೇಖನಗಳ ಸಂಗ್ರಹ ಕೃತಿ) ಕಂಗಳ ಅಳತೆ (ಲೇಖನಗಳ ಸಂಗ್ರಹ ...

READ MORE

Related Books