ಅಭಿಮಾನದ ನನ್ನೂರು

Author : ಬಸವರಾಜ ಫಕೀರಪ್ಪ ಸುಣಗಾರ

Pages 212

₹ 175.00




Year of Publication: 2018
Published by: ನಿವೇದಿತ ಪ್ರಕಾಶನ
Address: ನಂ. 3437, (1ನೇ ಮಹಡಿ) 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀನಗರ. ಬನಶಂಕರಿ, 2ನೇ ಹಂತ, ಬೆಂಗಳೂರು
Phone: 9448733323

Synopsys

ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಅವರ ಲೇಖನಗಳ ಕೃತಿ ‘ಅಭಿಮಾನದ ನನ್ನೂರು’. ಈ ಕೃತಿಗೆ ಮುನ್ನುಡಿ ಸ.ರಾ. ಸುಳಕೂಡೆ ‘ಈ ಲೇಖನಗಳಲ್ಲಿ ಜಗತ್ತು, ಜಂಜಡ, ವೈರತ್ವ, ಹೋರಾಟ, ಹೊಡೆದಾಟ, ಸಂಘರ್ಷ, ಅಶಾಂತಿಯಿಂದ ಮುಕ್ತವಾಗಿ ನೆಮ್ಮದಿಯ ತಾಣವಾಗಲೆಂಬ ಮನೋಭಾವ ವ್ಯಕ್ತವಾಗಿದೆ. ಬದುಕಿನಲ್ಲಿ ಶೋಷಣೆ, ನೋವು ತರಿಸುವ, ಮಾನವತೆಗೆ ಕಂಟಕ ತೊಂದರೆಯಾಗಿ ಮಾರ್ಪಟ್ಟಿರುವ ಮೂಢನಂಬಿಕೆಯ ವಿರುದ್ಧದ ಕಾನೂನು ಕುರಿತು ಲೇಖಕರ ಅಭಿಪ್ರಾಯಗಳು ವ್ಯಕ್ತವಾಗಿದೆ, ವಿಶ್ವವಂದಿತ ಗಣರಾಯ, ಜೋಕುಮಾರಸ್ವಾಮಿ, ಪರಮಪಾವನೆ ಗಂಗಾದೇವಿ, ಶ್ರೀಕೃಷ್ಣ ಜನ್ಮಾಷ್ಟಮಿ, ಬಸವಣ್ಣನವರ ಧರ್ಮ ವಿಶ್ವಧರ್ಮ, ಡಾ.ಅಂಬೇಡ್ಕರರು ಅಮರರಾಗಿರುವರು ಎಂಬ ಲೇಖನಗಳು ಗಮನ ಸೆಳೆಯುವಂತಿವೆ.’ ಎಂದು ಪ್ರಶಂಸಿದ್ದಾರೆ

About the Author

ಬಸವರಾಜ ಫಕೀರಪ್ಪ ಸುಣಗಾರ

ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿಯವರು. ತಂದೆ ಫಕೀರಪ್ಪ, ತಾಯಿ ನಿಂಗಮ್ಮ. ಬಿಎ, ಟಿಸಿಎಚ್ ಪೂರೈಸಿದ್ದಾರೆ. ಪ್ರಶಸ್ತಿ: ಆದಶ೯ ಶಿಕ್ಷಕ ಪ್ರಶಸ್ತಿ,ಗುರು ಕುಲ ರಾಜ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ 2013,ಮೌಲ್ಯ  ಶಿಕ್ಷಣ ಸಂಪದ ರಾಜ್ಯ ಪ್ರಶಸ್ತಿ, ವಿವಿಧ ಮಠಾಧೀಶರಿಂದ ಸೇವಾ ರತ್ನ ಪ್ರಶಸ್ತಿ. ಕೃತಿಗಳು: ಅಭಿಮಾನದ ನನ್ನೂರು(ಅಂಕಣ ಬರಹಗಳ ಸಂಕಲನ), ನಿಜಶರಣ ಅಂಬಿಗರ ಚೌಡಯ್ಯನವರು(ಲೇಖನಗಳ ಸಂಗ್ರಹ), ಆದರ್ಶ ಶಿಕ್ಷಕ: ಒಂದು ಚಿಂತನೆ (ಲೇಖನಗಳ ಸಂಕಲನ), ಅನಿಸಿದ್ದು. ...

READ MORE

Related Books