ಅಭಿನವ ಮೆಕೆಂಜಿ ಎಚ್.ಎಲ್.‌ ನಾಗೇಗೌಡ

Author : ಹೆಚ್.ಆರ್. ಚೇತನ

Pages 224

₹ 250.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

ಅಭಿನವ ಮೆಕೆಂಜಿ ಎಚ್.ಎಲ್.‌ ನಾಗೇಗೌಡ ಎಂಬುದು ಲೇಖಕಿ ಹೆಚ್.‌ ಆರ್.‌ ಚೇತನಾ ಅವರು ರಚಿಸಿದ ಜೀವನ ಚರಿತ್ರೆಯ ಕೃತಿ. ಒಕ್ಕಲಿಗ ಸಾಧಕರ ಸರಣಿ ಪುಸ್ತಕ ಇದು. ಕೃತಿಯ ಬೆನ್ನುಡಿಯಲ್ಲಿ ಎಚ್.ಎಲ್. ನಾಗೇಗೌಡರನ್ನು ಮರೆತು ಕರ್ನಾಟಕದಲ್ಲಿ ಜಾನಪದ ಕ್ಷೇತ್ರವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಾಗೇಗೌಡರ ಉಸಿರು, ಕನಸು, ಕರ್ಮಕ್ಷೇತ್ರ' ಎಲ್ಲವೂ ಜಾನಪದವಾಗಿತ್ತು. ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿಯ ದೊಡ್ಡಮನೆಯ ದೊಡ್ಡಮಗ ತನ್ನ ತಂದೆಯ ಆಸೆಯಂತೆ ಸರ್ಕಾರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರು. ಜನಪದ ಸಾಹಿತ್ಯ, ಕಲೆ, ಕಲಾವಿದರನ್ನು ಕುರಿತು ಅವರಿಗೆ ಅಪಾರ ಪ್ರೀತಿ ಇತ್ತು. ಅವರ ಗಡುಸು ಮುಖ, ಗಡುಸು ಧ್ವನಿಗೆ ಎಂಥವರೂ ಅವರ ಮುಂದೆ ಅಧೀರರಾಗಬೇಕು. ಅವರ ಹೊರನೋಟ ಹಾಗಿತ್ತು. ಆದರೆ, ಅವರು 'ವ್ಯಾಘ್ರಮುಖದ ಗೋವು', ಮೃದು ಹೃದಯ ವಿಧಾನ ಪರಿಷತ್ತಿನ ಸದಸ್ಯ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕ ಹೀಗೆ ಹಲವು ಜವಾಬ್ದಾರಿಗಳನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದರು. ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ನೀಡಿರುವ ನಾಗೇಗೌಡರು ಕನ್ನಡದ ಮೇರು ಸಾಧಕರಲ್ಲಿ ಒಬ್ಬರು. ಅವರ ಸುದೀರ್ಘ ಬಾಳ ಕತೆಯನ್ನು ಲೇಖಕಿಯು ಈ ಕೃತಿಯಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ.

About the Author

ಹೆಚ್.ಆರ್. ಚೇತನ

ಲೇಖಕಿ ಹೆಚ್.ಆರ್. ಚೇತನ ಅವರು  ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿಯವರು. ತಂದೆ ಹ.ಕ. ರಾಜೇಗೌಡ, ತಾಯಿ ಎನ್.ಜಿ. ಲಲಿತ. ಜಾನಪದ ವಿಷಯದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಮುಖ್ಯಸ್ಥರು. ಮೂಡಲಪಾಯ ಯಕ್ಷಗಾನ ಕುರಿತು ಸಂಶೋಧನಾ ಪ್ರಬಂಧ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶಿಕ್ಷಣ, ಸಾಹಿತ್ಯ, ಜಾನಪದಕ್ಕೆ ಸಂಬಂಧಿಸಿದ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಗ್ರಾಮಾಂತರ, ಗ್ರಾಮಾಂತರಂಗ, ಜಾನಪದ ಕುಣಿತಗಳು, ಜಾನಪದ ಜೊಂಪ, ಹೆಳವರು ಹೇಳಿದ ಕರಿರಾಜನ ಕತೆ, ಹೆತ್ತಗೋನಹಳ್ಳಿ ಮಾಯಮ್ಮ, ಕುವೆಂಪು ಸಾಹಿತ್ಯದಲ್ಲಿ ಕುಟುಂಬ ಪರಿಕಲ್ಪನೆ, ...

READ MORE

Related Books