ಅಬೂವಿಂದ ಬರಾಮಕ್ಕೆ

Author : ಶಿವರಾಮ ಕಾರಂತ

Pages 175

₹ 99.00




Year of Publication: 2020
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09
Phone: 08040114455

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಪ್ರವಾಸ ಕಥನ-ಅಬೂವಿಂದ ಬರಾಮಕ್ಕೆ. ಕಥೆ, ಕಾದಂಬರಿ, ವಿಜ್ಞಾನ, ಕಲೆ, ಚಿತ್ರಕಲೆ, ವಾಸ್ತುಶಿಲ್ಪ, ಮಕ್ಕಳಿಗಾಗಿ ವಿಜ್ಞಾನ ಹೀಗೆ ಹತ್ತು ಹಲವು ವಲಯಗಳಲ್ಲಿ ಕೃಷಿ ಮಾಡಿರುವ ಲೇಖಕರು ಪ್ರವಾಸ ಕಥನ ದಲ್ಲೂ ಉತ್ತಮ ಸಾಹಿತ್ಯ ಕೃತಿಗಳನ್ನು ನೀಡಿದ್ದು ಆ ಪೈಕಿ -‘ಅಬೂವಿಂದ ಬರಾಮಕ್ಕೆ’ ಎಂಬುದು ಪ್ರವಾಸ ಕಥನ. ರಾಜಸ್ತಾನದ ಅಬೂ ಎಂಬ ಸ್ಥಳದಿಂದ ಬರಾಮತನಕ -ತಮ್ಮ ಪ್ರವಾಸದ ವಿಚಾರಗಳನ್ನು ವ್ಯಕ್ತ ಮಾಡಿದ್ದಾರೆ. ಕಥನ ಶೈಲಿ, ಸರಳ ಭಾಷೆ, ವೈವಿಧ್ಯಮಯ ದೃಷ್ಟಿಕೋನ, ವಿಶ್ಲೇಷಣೆಯ ತೀಕ್ಷಣತೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books