ಅಚಲ ಗುರುಮಾರ್ಗ

Author : ಪದ್ಮಾಲಯ ನಾಗರಾಜ್

Pages 190

₹ 200.00
Year of Publication: 2018
Published by: ಆದಿಮ ಪ್ರಕಾಶನ
Address: ಕೋಲಾರ

Synopsys

ಬೌದ್ದ ಮಧ್ಯಮಮಾರ್ಗಿಗಳಾಗಿರುವ ಅಚಲಿಗರು ಕರ್ನಾಟಕದಲ್ಲಿ ಹೇಗೆ ನೆಲೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲಕಾರಿ ವಿವರಗಳನ್ನು ಈ ಕೃತಿ ಬಿಚ್ಚಿಡುತ್ತದೆ. ಈ ನೆಲದ ಸಂಸ್ಕೃತಿ ನೆಲೆಯಲ್ಲಿ ಅನಿವಾರ್ಯವಾಗಿ ಆಗಲೇ ಬೇಕಿರುವ ಪಲ್ಲಟಗಳನ್ನು ಗುರುತಿಸುವುದರೊಂದಿಗೆ, ಆ ಪಲ್ಲಟಗಳ ಸ್ವರೂಪವನ್ನು, ಅದರ ಹಿಂದಿನ ತಾತ್ವಿಕ ವಿನ್ಯಾಸವನ್ನು ಸಿದ್ಧಪಡಿಸಿಕೊಡುತ್ತಿರುವುದರಿಂದಲೇ ಇದು ಮಹತ್ವದ ಹಾಗೂ ಅನನ್ಯ ಕೃತಿಯೆಂದು ಬೆನ್ನುಡಿಯಲ್ಲಿ ಲಕ್ಷ್ಮೀಪತಿ ಕೋಲಾರ ಅವರು ಅಭಿಪ್ರಾಯಪಡುತ್ತಾರೆ. ಅಚಲ ಮಾರ್ಗ ಏನು ಎನ್ನುವುದರ ವಿವರಗಳನ್ನು ತಿಳಿಸಿಕೊಡುವುದಲ್ಲದೆ, ಆ ಚಿಂತನ ಸಾರವನ್ನು ಕೃತಿ ಹೇಳುತ್ತದೆ. ಜೊತೆಗೆ ಆ ಮಾರ್ಗದಲ್ಲಿ ಸಾಗಿದವರ ಬದುಕನ್ನು ತೆರೆದಿಡುವ ಪ್ರಯತ್ನವನ್ನೂ ಈ ಕೃತಿಯು ಮಾಡುತ್ತದೆ. ಕನ್ನಡದ ನೆಲದಲ್ಲಿ ತಾತ್ವಿಕ ನೆಲೆಗಳ ಮೂಲಗಳನ್ನು ಅರಸುವ ಇದರ ಉದ್ದೇಶ ನಮ್ಮನ್ನು ಬುದ್ಧನ ಕಾಲದವರೆಗೂ ಕೊಂಡೊಯ್ಯುತ್ತದೆ.

About the Author

ಪದ್ಮಾಲಯ ನಾಗರಾಜ್

ಬಹುಮುಖ್ಯ ಸಂಸ್ಕೃತಿ ಚಿಂತಕರು, ಅಪರೂಪದ ಸಂಶೋಧಕರು, ಎಲ್ಲಕ್ಕಿಂತ ಮುಖ್ಯವಾಗಿ ಅಚಲಮಾರ್ಗಿಗಳು ಮತ್ತು ಅಪೂರ್ವ ತತ್ವಸಾಧಕರು ಪದ್ಮಾಲಯ ನಾಗರಾಜ್. ‘ಅಚಲ ಗುರು ಮಾರ್ಗ’ ಅವರ ಮಹತ್ವಪೂರ್ಣ ಕೃತಿ. ಕನ್ನಡ ಮತ್ತು ತೆಲುಗಿನ ಅಚಲ ತತ್ವಪದಗಳನ್ನು ಸಂಪುಟಗಳಲ್ಲಿ ಸಂಪಾದಿಸುತ್ತಿದ್ದಾರೆ. ಜೊತೆಗೆ ತಲೆಮಾರು ಕುಟೀರದ ನಾಟಿ ವೈದ್ಯರು. ...

READ MORE

Related Books