ಅದ್ಭುತಯಾನ

Author : ಪ್ರದೀಪ್ ಕೆಂಜಿಗೆ

Pages 150

₹ 108.00




Year of Publication: 2011
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು- 570004

Synopsys

‘ಅದ್ಭುತಯಾನ’ ಥಾರ್ ಹೈರ್ಡಾಲ್ ರ ಕೊಂಟಿಕಿ ಎಕ್ಸ್ ಪಿಡಿಶನ್ ಪುಸ್ತಕದ ಸಂಗ್ರಹ ಭಾವಾನುವಾದ. ಪೆಸಿಫಿಕ್ ಮಹಾಸಾಗರ ಜಗತ್ತಿನ ಅತ್ಯಂತ ವಿಸ್ತಾರವಾದ ಜಲರಾಶಿ. ಇದರ ಮಧ್ಯೆ ಇರುವ ದೀಪ ಸಮುದಾಯಗಳನ್ನು ಪಾಲಿನೇಷ್ಯಾ ಎಂದು ಕರೆಯುತ್ತಾರೆ. ಯೂರೋಪಿಯನ್ನರು ಈ ದೀಪಸ್ತೋಮಗಳನ್ನು ಮೊಟ್ಟಮೊದಲು ಕಂಡಾಗ, ಆಗಾಲೇ ಅಲ್ಲಿ ದ್ವೀಪ ನಿವಾಸಿಗಳಿದ್ದಿದ್ದು ಎಲ್ಲರಿಗೂ ಬಹು ದೊಡ್ಡ ಒಗಟಾಗಿತ್ತು. ಆ ಎಲ್ಲ ದ್ವೀಪಗಳೂ ಸಹಸ್ರಾರು ಮೈಲು ವಿಸ್ತಾರದ ಪೆಸಿಫಿಕ್ ಮಹಾಸಾಗರದಿಂದ ಸುತ್ತುವರಿದಿತ್ತು. ದೋಣಿ ಅಥವಾ ಹಡಗುಗಳನ್ನು ಕಟ್ಟುವ ತಂತ್ರಜ್ಞಾನವೇ ಗೊತ್ತಿಲ್ಲದ ದಕ್ಷಿಣ ಅಮೆರಿಕಾದ ಜನರೇ ಇಲ್ಲಿಗೆ ವಲಸೆ ಬಂದರೆಂದು ಸಾಧಿಸಲು ಆ ಜನರಿಗೆ ಗೊತ್ತಿದ್ದ ನೌಕೆಗಳೆಂದರೆ ತೆಪ್ಪಗಳು ಮಾತ್ರ. ಅವುಗಳ ಮೇಲೂ ಮಹಾ ಸಾಗರಗಳನ್ನು ದಾಟಲು ಸಾಧ್ಯ ಎಂದು ತೋರಿಸಿದರೆ ಮಾತ್ರ ಪಾಲಿ ನೇಷಿಯನ್ನರು ದಕ್ಷಿಣ ಅಮೆರಿಕಾದಿಂದ ಬಂದ ಸೂರ್ಯವಂಶಜರೆಂದು ಸಾಧಿಸಬಹುದಿತ್ತು. ಈ ಸವಾಲನ್ನೆದುರಿಸಿ ಪ್ರಾಚೀನ ತೆಪ್ಪವೊಂದರ ಮೇಲೆ ಪೆಸಿಫಿಕ್ ಮಹಾಸಾಗರವನ್ನು ದಾಟಿದ ಆರು ಜನ ಮಹಾ ಸಾಹಸಿಗಳ ಕಥೆ 'ಅದ್ಭುತ ಯಾನ' .

ಇದು ಪ್ರದೀಪ ಕೆಂಜಿಗೆಯವರ ಎರಡನೆಯ ಪುಸ್ತಕ. ಥಾರ್ ಹೈರ್ಡಾಲ್‌ರ 'ಕೊಂಟಿಕಿ' ಸಾಹಸಕಥೆ ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ದ ಸಾಹಸ ಕಥಾ ಸಾಹಿತ್ಯ. ಅದನ್ನು ಅತಿ ಸುಂದರವಾಗಿ ಮೂಲದ ಆಶಯಗಳಿಗೆ ಕೊಂಚವೂ ಕುಂದಾಗದಂತೆ ಪ್ರದೀಪ ಕೆಂಜಿಗೆ ಅವರು ಭಾಷಾಂತರ ಮಾಡಿದ್ದಾರೆ.

About the Author

ಪ್ರದೀಪ್ ಕೆಂಜಿಗೆ
(23 January 1959)

ಕೃಷಿಕ, ಸಂಶೋಧಕ, ಕಾದಂಬರಿಕಾರ ಪ್ರದೀಪ್ ಕೆಂಜಿಗೆ ಲೇಖಕರೂ ಹೌದು. ಜನನ 1959ರ ಜನೆವರಿ 23 ರಂದು. ಲೇಖಕ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಸೇರಿ ಮಿಲೆನಿಯಮ್ ಸರಣಿ ಮತ್ತು ಪ್ಯಾಪಿಲಾನ್ ಸರಣಿ ಪುಸ್ತಕಗಳು ಬರೆದು/ಅನುವಾದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ 'ಕೆಂಜಿಗೆ' ಇವರ ಊರು. ಅಮೇರಿಕಾದ ಪ್ರಸಿದ್ಧ ಕರಿಯರ ವಿಶ್ವವಿದ್ಯಾಲಯ ಟಸ್ಕ್ಗೀಯಲ್ಲಿ ಪರಿಸರ ವಿಜ್ಞಾನ ಅಭ್ಯಸಿಸಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡಿದ ಅನುಭವವಿದೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿ ನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿ ಎಚ್ ...

READ MORE

Related Books