ಈ ಕಾದಂಬರಿಯಲ್ಲಿ ವಟಪುರವೆಂಬ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿ ಸ್ವಾತಂತ್ಯ್ರಪೂರ್ವದಿಂದ ಸ್ವಾತಂತ್ಯ್ರ ನಂತರದ ನಾಲ್ಕೈದು ದಶಕಗಳಲ್ಲಿ ಯಾವೆಲ್ಲ ಸ್ಥಿತ್ಯಂತರಗಳನ್ನು ಕಂಡಿತು ಎಂಬುದನ್ನು ಚಿತ್ರಿಸಲಾಗಿದೆ. ಮೂರು ತಲೆಮಾರುಗಳಲ್ಲಿ ಜನಜೀವನದ ಮೌಲ್ಯಗಳಲ್ಲಿ ಉಂಟಾದ ಕಾಲಕಾಲದ ಬದಲಾವಣೆಯನ್ನು ವಟಪುರದ ಕಥಾನಕ ತೊಡಗುವ ಕಾಲದಲ್ಲಿ ಆ ಊರಿನ ಹೆಸರಿಗೆ ಕಾರಣವಾದ ವಟವೃಕ್ಷ ಪುರಾತನ ವೈಭವವನ್ನು ಸಾರುವ ತೆರೆನಲ್ಲಿ ಒಂದು ಎಕರೆ ಜಮೀನನ್ನು ಆವರಿಸುವಷ್ಟು ಜಾಗದಲ್ಲಿ ಪಕ್ಷಿಗಳಿಗೆ ನಿಶ್ಚಿಂತ ಆವಾಸವನ್ನೂ ಒದಗಿಸುತ್ತದೆ. ಇನ್ನೂ ಹತ್ತು ಹಲವು ವಿಧಗಳಲ್ಲಿ ವಟಪುರದ ತಲೆಮಾರಿನ ಜನರು ದಾನ, ಧರ್ಮ , ದೇವರು, ನಂಬಿಕೆಗಳ ನೆರಳಿನಲ್ಲಿ ಬದುಕನ್ನು ಸಾಗಿಸುತ್ತಾರೆ. ಊರಿಗೆ ಆಪತ್ತು ಬಂದಾಗ ಜಾತಿ, ಮತ , ಬಡವ, ಶ್ರೀಮಂತರೆನ್ನದೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುತ್ತಾರೆ. ಹೀಗೆ ವಟಪುರದ ಮುಂದಿನ ತಲೆಮಾರಿನ ಕಥೆ ಈ ಕಾದಂಬರಿಯು ಹೇಳುತ್ತ ಸಾಗುತ್ತದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE