ಅದೃಷ್ಟ

Author : ಪಾರ್ವತಿ ಪಿಟಗಿ

Pages 153

₹ 80.00




Year of Publication: 2009
Published by: ಅನ್ನಪೂರ್ಣ ಪ್ರಕಾಶನ
Address: ಸಿರಿಗೇರಿ-583120, ಸಿರಗುಪ್ಪಾ ತಾಲೂಕು, ಬಳ್ಳಾರಿ ಜಿಲ್ಲೆ
Phone: 26604835

Synopsys

ಈ ಸಂಕಲನದಲ್ಲಿ ಒಟ್ಟು 21 ಕತೆಗಳಿವೆ. ಇಲ್ಲಿನ ಕಥೆಗಳಲ್ಲಿ ಪ್ರಮುಖವಾಗಿ ಕಂಡುಬರುವುದು ಕುಟುಂಬದ ಆವರಣದಲ್ಲಿ ನಡೆಯುವ ವಿದ್ಯಮಾನಗಳನ್ನು ಕಥಾಹಂದರದಲ್ಲಿ ವಿಸ್ತರಿಸುವ ಕುಸುರಿ ಕಲೆ. ಹೆಣ್ಣು ಇಲ್ಲಿನ ಹೆಚ್ಚಿನ ಕಥೆಗಳ ಪ್ರಮುಖ ಪಾತ್ರ. ತನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕೆ ಸಿಡಿದು ನಿಲ್ಲುತ್ತಾಳೆ ಹಾಗು ನ್ಯಾಯ ಪಡೆಯುತ್ತಾಳೆ. ಪರಿಸ್ಥಿತಿಯನ್ನು ಎದುರಿಸಿ ಬದುಕುವ ಛಲವನ್ನು ಪ್ರದರ್ಶಿಸುತ್ತವೆ. ಈ ಮೂಲಕ ಸ್ತ್ರೀ ಸಬಲೀಕರಣಕ್ಕೆ ಸೂಕ್ತವಾದ ವಿವರಗಳನ್ನು ಇಲ್ಲಿರುವ  ಕಥೆಗಳು ವಿವರಿಸುತ್ತದೆ. ಈ ಎಲ್ಲ ಕತೆಗಳೂ ಕನ್ನಡದ ಪ್ರಮುಖ ಪತ್ರಕೆಗಳಾದ ಸುಧಾ, ತರಂಗ, ಕರ್ಮವೀರ, ಮಯೂರ, ಮಲ್ಲಿಗೆ, ಲೋಕದರ್ಶನ, ಸಂಯುಕ್ತ ಕರ್ನಾಟಕ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

About the Author

ಪಾರ್ವತಿ ಪಿಟಗಿ
(02 June 1975)

ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ.  ಅವರ ಹಲವು ಕಥೆ, ಕಾದಂಬರಿ, ಲೇಖನಗಳು  ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...

READ MORE

Related Books