ಆಧ್ಯಾತ್ಮದೆಡೆಗೆ.....

Author : ವೀರಭದ್ರಗೌಡ ಪಾಟೀಲ

Pages 240

₹ 0.00




Year of Publication: 2020
Published by: ಪ್ರಜಾಪಿತ ಬ್ರಹ್ಮಾಕುಮಾರಿ  ಈಶ್ವರೀಯ ವಿಶ್ವವಿದ್ಯಾಲಯ
Address: ಅಂತಾರಾಷ್ಟ್ರೀಯ ಮುಖ್ಯಾಲಯ, ಪಾಂಡವ ಭವನ, ಅಬೂ ಪರ್ವತ, ರಾಜಸ್ತಾನ.

Synopsys

ಬ್ರಹ್ಮಕುಮಾರಿ ಉಷಾ ದೀದಿ ಅವರು ಹಿಂದಿ ಭಾಷೆಯಲ್ಲಿ ಬರೆದ ಕೃತಿಯನ್ನು ಲೇಖಕ ವೀರಭದ್ರಗೌಡ ಪಾಟೀಲರು ‘ಆಧ್ಯಾತ್ಮದೆಡೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಒಂದು ಅನುಪಮ ವಿದ್ಯಾಲಯ,  ಆಧ್ಯಾತ್ಮಿಕ ಅಸ್ತಿತ್ವ, ಆತ್ಮದ ಅಂತರಂಗ, ಪರಮಾತ್ಮನ ಸತ್ಯ ಸ್ವರೂಪದ ರಹಸ್ಯ ಉದ್ಘಾಟನೆ, ರಾಜಯೋಗದ ಆಧಾರ, ವಿಧಿ ಮತ್ತು ವಿಭಿನ್ನ ಅವಸ್ಥೆಗಳು, ಕಾಲಚಕ್ರದ ರಹಸ್ಯ, ಕರ್ಮದ ಗುಹ್ಯಗತಿ, ರಾಜಯೋಗದಿಂದ ಅಷ್ಟಶಕ್ತಿಗಳ ಪ್ರಾಪ್ತಿ ಹಾಗೂ ಜೀವನದಲ್ಲಿ ಆಧ್ಯಾತ್ಮಕತೆಯ ಅವಶ್ಯಕತೆ ಹೀಗೆ ವಿವಿಧ ಅಧ್ಯಾಯಗಳಡಿ ಶ್ರೇಷ್ಠತಮ ಮನದ ಶಕ್ತಿಯ ಸ್ವರೂಪವನ್ನು ತೋರುವುದು ಈ ಕೃತಿಯ ಉದ್ದೇಶವಾಗಿದ್ದು, ಅನುವಾದವು ಸರಳ ಹಾಗೂ ಸುಂದರವಾಗಿ ಮೂಡಿಬಂದಿದೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕರ್ನಾಟಕ ವ್ಯಾಪ್ತಿಯಲ್ಲಿ ಅತ್ಯಧಿಕ ಓದುಗರನ್ನು ಸೆಳೆದ ಕೃತಿ ಇದು.  

‘ಕೃತಿಯಲ್ಲಿಯ ವಿಚಾರಗಳಲ್ಲಿ ಸತ್ಯದ ಸತ್ವವಿದೆ. ಪರಿವರ್ತನೆಯ ಪ್ರೇರಣೆಯಿಂದ, ಶಕ್ತಿಯ ಸಂಚಯವಿದೆ. ಅನುಭೂತಿಯ ಶಿಖರವಿದೆ. ಜೀವನ ದರ್ಶನವಿದೆ. ಮೇಲಾಗಿ ಆತ್ಮವಿಶ್ವಾಸವನ್ನು ಸಹಜವಾಗಿ ಮೂಡಿಸುತ್ತದೆ ’ ಎಂದು ಅನುವಾದಕರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಿಗರಿಗೆ ಈ ಕೃತಿಯಲ್ಲಿ ವಿಚಾರಗಳು ಸರಳವಾಗಿ ಸಿಗಲಿ ಎಂಬ ಸದುದ್ದೇಶದೊಂದಿಗೆ ಕೃತಿಯ ಬೆಲೆಯನ್ನು ಪ್ರಕಾಶನ ಸಂಸ್ಥೆಯು ನಮೂದಿಸಿಲ್ಲ.

 

About the Author

ವೀರಭದ್ರಗೌಡ ಪಾಟೀಲ

ಲೇಖಕ ವೀರಭದ್ರಗೌಡ ಪಾಟೀಲರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದವರು. ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ನಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತರು. ಸದ್ಯ ವಕೀಲ ವೃತ್ತಿಯಲ್ಲಿದ್ದಾರೆ. ಇವರು ಬರೆದ ಲೇಖನಗಳು, ಶರಣರ ವಚನಗಳ ಸಾರಭರಿತ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೈದ್ಧಾಂತಿಕ ಅನುಭಾವಗಳಿಂದ ಪ್ರೇರಿತರಾದವರು. ಬ್ರಹ್ಮಾಕುಮಾರಿ ಶಿಕ್ಷಕಿ, ಸಹೋದರಿ ಉಷಾಜೀ ಅವರು ಹಿಂದಿ ಭಾಷೆಯಲ್ಲಿ ಬರೆದ ಕೃತಿಯನ್ನು ಇವರು ‘ಅಧ್ಯಾತ್ಮದೆಡೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books