ಅಡಿಗಡಿಗೂ ಗುರುವಂದನೆ ಮತ್ತು ಅನವರತ ಅಂತರಂಗ ಮೃದಂಗ

Author : ಟಿ. ನಾಗರಾಜು

Pages 104




Year of Publication: 2022
Published by: ಟಿ. ನಾಗರಾಜು
Address: #101, ಸಪ್ತಗಿರಿ ಮೀಡ್ಸೌ, ಪುಟ್ಟೇನಹಳ್ಳಿ, 24ನೇ ಮುಖ್ಯ ರಸ್ತೆ, ಜೆ.ಪಿ. ನಗರ, ಬೆಂಗಳೂರು- 560078

Synopsys

ಲೇಖಕ ಟಿ. ನಾಗರಾಜು ಅವರ ಲೇಖನ ಕೃತಿ ʻಅಡಿಗಡಿಗೂ ಗುರುವಂದನೆ ಮತ್ತು ಅನವರತ ಅಂತರಂಗ ಮೃದಂಗʼ. ಕರ್ನಾಟಕ ಸಂಗೀತದ ಪ್ರಧಾನ ಅಂಗವಾದ ಮೃದಂಗ ಲಯವಾದ್ಯದ ಬಗ್ಗೆ ತ್ರಿಮೂರ್ತಿ ಕಲಾವಿದರುಗಳ ಹೆಸರಿನಲ್ಲಿ ಲೇಖಕರು ತಮ್ಮದೇ ಆದ ಬೆಳಕು ಚೆಲ್ಲಿದ್ದಾರೆ. ಅವರು ಪಾಲ್‌ಘಾಟ್‌ ಮಣಿ ಅಯ್ಯರ್‌, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ರಾಮನಾಥಪುರಂ ಸಿ.ಎಸ್.‌ ಮುರುಗಭೂಪತಿ. ಈ ಮೂವರೂ ತಮ್ಮ ಭಾಲ್ಯದಲ್ಲಿ ಅಂದಿಗೆ ರೂಢಿಯಲ್ಲಿದ್ದ ಗುರುಕುಲ ವಾಸದಲ್ಲಿ ಸಂಗೀತ ಶಿಕ್ಷಣ ಪಡೆದು, ಮೃದಂಗ ಸಹಕಾರ, ತನಿಗಳಲ್ಲಿ ವೈವಿಧ್ಯತೆ ತಂದುಕೊಟ್ಟ ಅತ್ಯುತ್ತಮ ಕಲಾವಿದರು ಎಂಬುವುದನ್ನು ನಿರೂಪಿಸುತ್ತಾ ಈ ಕೃತಿಯಲ್ಲಿ ಅವರಿಗೆ ವಂದನೆಗಳನ್ನು ಅರ್ಪಿಸುತ್ತಾರೆ.

About the Author

ಟಿ. ನಾಗರಾಜು

ಲೇಖಕ ಟಿ. ನಾಗರಾಜು ಅವರು ಕರ್ನಾಟಕ ಶಾಸ್ರ್ತೀಯ ಸಂಗೀತಗಾರರು. ಇವರ ಸಂಗೀತದ ಮೊದಲ ಗುರು ತಾಯಿ ಪಾರ್ವತಿ. ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಭವಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಎಲ್.ಐ..ಸಿ. ಕಂಪೆನಿಯಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ನಿವೃತ್ತಿಯನ್ನು ಹೊಂದಿದ್ದಾರೆ. ಕೃತಿಗಳು: ʻಕೂಗಿ ಹೇಳುತಿದೆ ಅಂತರಾಳʼ, ʻಸವಿನೆನಪುಗಳುʼ, ʻನೆನಪಿನಂಗಳʼ, ʻಅಡಿಗಡಿಗೂ ಗುರುವಂದನೆʼ ಇತ್ಯಾದಿ... ...

READ MORE

Related Books