ಆದಿಪುರಾಣ: ಸಾಂಸ್ಕೃತಿಕ ಮುಖಾಮುಖಿ

Author : ಬಿ.ಎಂ. ಪುಟ್ಟಯ್ಯ

Pages 158

₹ 80.00




Year of Publication: 2006
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಆದಿಪುರಾಣವನ್ನು ಹತ್ತನೇ ಶತಮಾನದಲ್ಲಿ ಹಾಗೂ ನಮ್ಮ ಕಾಲದಲ್ಲೂ ಏಕಕಾಲಕ್ಕೆ ಇಟ್ಟು ಗ್ರಹಿಸುವ ವಿಧಾನ, ಸಾಹಿತ್ಯ ಅಧ್ಯಯನದ ದೃಷ್ಟಿಯಿಂದ ತುಂಬ ಉಪಯುಕ್ತವಾದುದು. 

ಪನನ್ನು ಜೈನ ಕವಿ ಎಂತಲೂ, ಅವನ ಎರಡು ಕೃತಿಗಳಲ್ಲಿ ಒಂದು ಲೌಕಿಕ ಮತ್ತೊಂದು ಧಾರ್ಮಿಕ ಎಂತಲೂ ಸಾಂಪ್ರದಾಯಿಕವಾಗಿ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಂಪನನ್ನು ಮತ್ತು ಆತನ ಕೃತಿಗಳನ್ನು ಇಂದು ಅಧ್ಯಯನ ಮಾಡಬೇಕಾದ ಸವಾಲುಗಳು ಹಾಗೂ ದಾರಿಗಳು ಯಾವುವು ಎಂಬುದನ್ನು ಇಲ್ಲಿಯ ಪ್ರಬಂಧಗಳು ಹೇಳುತ್ತವೆ.

ಕೃತಿಯ ಅಧ್ಯಾಯಗಳು ಹೀಗಿವೆ: ಸಾಂಸ್ಕೃತಿಕ ಮುಖಾಮುಖಿ : ಸೃಜನಶೀಲ ಸ್ವಾತಂತ್ರ್ಯ ಹೋರಾಟ , ಸಿದ್ಧ ಮಾದರಿಯ ಆಲೋಚನೆಗಳಿಗೆ ಆದಿಪುರಾಣದ ಭಿನ್ನಮತ , ಆದಿಪುರಾಣ : ಓದಿನ ಆಯಾಮಗಳು ,ಆದಿಪುರಾಣ : ಅನೇಕತೆಯ ಸಾಂಸ್ಕೃತಿಕ ಘಟಕ ,ಆದಿಪುರಾಣದಲ್ಲಿ ಸ್ತ್ರೀ ಪ್ರಪಂಚದ ಬಳಕೆ ಒಂದು ಟಿಪ್ಪಣಿ , ಅಂತರ್ಜಲ ಅನ್ವೇಷಣೆಯಲ್ಲಿ ಪಂಪ ,ಆದಿಪುರಾಣ : ಅನುಭವದ ವಿಭಿನ್ನ ನೆಲೆಗಳನ್ನು ತೆರೆಯುತ್ತ.. ,ಆದಿಪುರಾಣ : ಭಿನ್ನವಾದಗಳೊಡನೆ ಮುಖಾಮುಖಿ ,ಆದಿಪುರಾಣ : ಒಂದು ಓದು ಮತ್ತು ಅಧ್ಯಯನ ,ಆದಿಪುರಾಣಗಳ ಅಧ್ಯಯನಗಳ ಸಮೀಕ್ಷೆ.

About the Author

ಬಿ.ಎಂ. ಪುಟ್ಟಯ್ಯ
(01 June 1967)

ಡಾ.ಬಿ. ಎಂ. ಪುಟ್ಟಯ್ಯ ಅವರು ಎಂ.ಎ ಕನ್ನಡ ಪದವಿಯಲ್ಲಿ  ಪ್ರಥಮ ರ್‍ಯಾಂಕ್ ಪಡೆದು ಅಲಕ್ಷಿತ ವಚನಕಾರರ ಲೋಕದೃಷ್ಟಿ ಎಂಬ ವಿಷಯದ ಮೇಲೆ  ಎಂ. ಫಿಲ್ ಪದವಿ ಪಡೆದರು. ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿ ಸಂಸ್ಕ್ರತಿ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿಯನ್ನು 1998 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ  ಪಡೆದರು. ಪ್ರಸ್ತುತ ಕನ್ನಡ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ, ಸಂಸ್ಕ್ರತಿ ಅಧ್ಯಯನ, ಶಿಕ್ಷಣ ಆರ್ಥಿಕತೆ ಹಾಗೂ ರಾಜಕೀಯ ಅಧ್ಯಯನಗಳು, ಹೋರಾಟ ಚಳುವಳಿ ಹಾಗೂ ...

READ MORE

Related Books