ಅದ್ವೈತಾನುಭವ

Author : ವಿ.ಎಂ. ಉಪಾಧ್ಯಾಯ

Pages 465

₹ 265.00




Published by: ಶ್ರೀಕೃಷ್ಣ ಆಶ್ರಮ
Address: ಮೈಸೂರು

Synopsys

‘ಅದ್ವೈತಾನುಭವ’ ಕೃತಿಯು ವಿ.ಎಂ. ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಉಪನಿಷತ್ತುಗಳು, ಬ್ರಹ್ಮಸೂತ್ರ, ಮತ್ತು ಶ್ರೀಮದ್ಭಗವದ್ಗೀತೆ ಮತ್ತು ಇವುಗಳಿಗೆ ಶ್ರೀಮದ್ ಶಂಕರಾಚಾರ್ಯರು ಬರೆದ ಭಾಷ್ಯಗಳಾಗಿವೆ. ಅದ್ವೈತ ಸಿದ್ಧಾಂತವನ್ನು ಅಮೂಲಾಗ್ರವಾಗಿ ಶಾಸ್ತ್ರಜ್ಞಾನವಿಲ್ಲದ ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶದಿಂದ ಬರೆದ ಗ್ರಂಥಗಳ ಸರಣಿಯ ಏಳು ಪುಸ್ತಕಗಳಲ್ಲಿ 4ನೇ ಪುಸ್ತಕ ಇದು. ಅದ್ಯಾತಾನುಸಂಧಾನ, ಮನ್ಮನ ಮತ್ತು ಬ್ರಹ್ಮಸೂತ್ರದ ಅಧೀಕರಣ ಸಂಚಕದ ಶಾಂಕರಭಾವ್ಯದ ನಿದಿಧ್ಯಾಸ ಜಗತ್ತಿನ ಸೃಷ್ಟಿಯ ಕುರಿತು ಸುಮಾರು 30ಕ್ಕೂ ಮಿಕ್ಕಿ ಗ್ರೀಕ್ ಮತ್ತು ಪಾಶ್ಚಾತ್ಯ ತತ್ತ್ವಜ್ಞಾನಿಗಳ ಅಭಿಪ್ರಾಯಗಳನ್ನು ಇಲ್ಲಿ ಪರಾಮರ್ಶಿಸುತ್ತದೆ,

ಉಪನಿಷತ್ತುಗಳಲ್ಲಿ ಹೇಳಲಾದ ವಿವಿಧ ಜಗದುತ್ಪತ್ತಿಯ ಕ್ರಮಗಳನ್ನೂ ವಿವರಿಸಿ ಜಗತ್ತಿನ ಸೃಷ್ಟಿ ನಿಜವಾಗಿಯೂ ಆಗಿದೆಯೇ? ಎನ್ನುವುದನ್ನು ವಿವೇಚಿಸುತ್ತದೆ. ಜಗತ್ತಿನಲ್ಲಿ ನಾನು ಇದ್ದೇನೋ? ನನ್ನಲ್ಲಿ ಜಗತ್ತಿದೆಯೋ? ಇದರ ವಿಮರ್ಶೆಯು ಪಾಶ್ಚಾತ್ಯ ಮತ್ತು ಭಾರತೀಯ ತತ್ತ್ವಜ್ಞರ ವಿಚಾರಗಳನ್ನು ಈ ಕೃತಿಯು ತಿಳಿಸುತ್ತದೆ. ಜಗದುತ್ಪತ್ತಿಯಾದದ್ದೇ ಹೇಗೆ ಹಾಗೂ ಜಗತ್ತಿನ ಉತ್ಪತ್ತಿ ಆಗಿದ್ದು ನಿಜವಾದರೆ ಉಪನಿಷತ್ತುಗಳಲ್ಲಿ ಆ ಕುರಿತು ಏಕಾಭಿಪ್ರಾಯ ಯಾಕಿಲ್ಲ ಎನ್ನುವುದನ್ನೂ ಚರ್ಚಿಸಿಲಾಗಿದೆ. ಜಗತ್ತು ಎಷ್ಟು ಸತ್ಯವೋ ಜಗತ್ತನ್ನು ನೋಡುವ 'ನಾನೂ ಆತ್ಮ ಸತ್ಯವಾಗಿರಬೇಕಲ್ಲವೇ? ಜಗತ್ತಿನ ಇರುವಿಕೆಗೆ ಪ್ರಮಾಣ ಯಾವುದು? ಜಗತ್ತು ಬ್ರಹ್ಮಸೃಷ್ಟಿ ಎನ್ನುವುದರ ಮರ್ಮವೇನು? ಜಗತ್ತು ಸೃಷ್ಟಿಪೂರ್ವದಲ್ಲಿ ಜಗತ್ತಾಗಿರಲಾರದು ಆದ್ದರಿಂದ, ಜಗದುತ್ಪತ್ತಿಗಿಂತ ಮೊದಲು ಏನಿತ್ತು ಈ ಎಲ್ಲ ವಿಷಯಗಳನ್ನು ಇಲ್ಲಿದ್ದು, ಜೊತೆಗೆ ಇದಕ್ಕೆ ನೀಡಿರುವ ಅಭಿಪ್ರಾಯಗಳನ್ನು ಕಾಣಬಹುದು.

About the Author

ವಿ.ಎಂ. ಉಪಾಧ್ಯಾಯ

ಲೇಖಕ ವಿ. ಎಂ ಉಪಾಧ್ಯಾಯ ಅವರು ಮೂಲತಃ ಭಟ್ಕಳದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಿಂದ ಎಂ. ಎ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು : ಪೂರ್ಣಸತ್ಯ, ಮರಣ ಪರಲೋಕ ಪುನರ್ಜನ್ಮ, ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ, ಆತ್ಮಾನ್ವೇಷಣೆ, ಮನ್ಥನ, ಅದ್ವೈತಾನುಭವ, ಅದ್ವೈತಾನುಸಂಧಾನ ...

READ MORE

Related Books