ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯೂಲಾಂಗ್ಚ)

Author : ರವಿ ಹಂಜ್

Pages 209

₹ 180.00




Year of Publication: 2020
Published by: ಸಂವಹನ ಮೈಸೂರು
Address: ರಾಜೇಂದ್ರ ಪ್ರಿಂಟರ್ಸ್ ಆಂಡ್ ಪಬ್ಲಿಷರ್‍ಸ್, 12/1,  ಇವಿನಿಂದ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು
Phone: 9902639593

Synopsys

ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ಸಾಗಿ ಬಂದಿದ್ದ ಹಾದಿಯಲ್ಲಿ ಭಿನ್ನ ಸಾಮಾಜಿಕ ಹಿನ್ನೆಲೆಯ ಮೂವರು ಮಿತ್ರರು (ಒಬ್ಬ ಚೀನಿ, ಭಾರತೀಯ ಮತ್ತು ಒಬ್ಬ ಅಮೆರಿಕನ್) ಪ್ರವಾಸ ಕೈಗೊಂಡು ಚೈನಾ-ಭಾರತ, ಇತಿಹಾಸ-ವರ್ತಮಾನ, ಕಮ್ಯುನಿಸ್ಟ್-ಪ್ರಜಾಪ್ರಭುತ್ವ, ಮತ್ತು ಜನಾಶಯ-ನಿರಾಶೆಗಳನ್ನು ವಿಶ್ಲೇಷಣೆಗೊಳಪಡಿಸಿ ಅನಾವರಣಗೊಳಿಸುವುದರೊಂದಿಗೆ ಪ್ರವಾಸದ ರಸಾಸ್ವಾದಗಳ ಅನುಭವವನ್ನೂ ಮೇಳೈಸಿದ ಕೃತಿ- ವೂಶಿಯನ್ ಡಿ ಲ್ಯುಲಾಂಗ್ಚ, ಯಾನೆ ಅಗಣಿತ ಅಲೆಮಾರಿ ಉರ್ಫ್ The Infinite Wanderer!

ಚೈನಾದ ಕಮ್ಯುನಿಸ್ಟ್ ಸರ್ಕಾರ ಹೇಗೆ ತನ್ನ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಬಂಡವಾಳಶಾಹಿಯಾಗಿದೆ ಮತ್ತು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕುಗಳು ಮೂಲಭೂತವಾಗಿಯೇ ಹೇಗೆ ಅನುಷ್ಠಾನದಲ್ಲಿ ಚ್ಯುತಿಗೊಂಡು ಅಸಂವಿಧಾನಿಕವಾಗಿವೆ ಎಂದು ವಾಸ್ತವ ಘಟನೆಗಳ ಮೂಲಕ ತೆರೆದಿಡುತ್ತ ಚಿಂತನೆಗೆ ಹಚ್ಚುವ ಕೃತಿ ಇದು.

 ಈ ಹಿನ್ನೆಲೆಯಲ್ಲಿ ಚೈನಾದ ಅಭಾಸಗಳನ್ನು, ಭಾರತದ ವಿಪರ್ಯಾಸಗಳನ್ನು ಆಯಾಯ ದೇಶಗಳ ಸೈದ್ಧಾಂತಿಕ ಆಡಳಿತ ವ್ಯವಸ್ಥೆಯ ಪರಿಮಿತಿಯಲ್ಲೇ ತೆರೆದಿಡುವ ಕನ್ನಡದ ಏಕೈಕ ಕೃತಿ, ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯೂಲಾಂಗ್ಚ)!

 

About the Author

ರವಿ ಹಂಜ್

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ.  ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು. ...

READ MORE

Related Books