ಅಗಣಿತ ವಿಸ್ಮಯ

Author : ರೋಹಿತ್ ಚಕ್ರತೀರ್ಥ

Pages 104

₹ 85.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

ಗಣಿತವು ಕಬ್ಬಿಣದ ಕಡಲೆ ಮತ್ತು ಅಷ್ಟೇ ಬೇಸರದ ವಿಷಯ ಎಂದು ಹಲವರು ತಿಳಿದಿದ್ದಾರೆ. ಆದರೆ, ಗಣಿತ ಶಾಸ್ತ್ರದಲ್ಲಿಯೂ ಬೆರಗಾಗಿಸುವ ಮೋಜಿನ ಲೆಕ್ಕಗಳಿವೆ. ಅಂತಹ ವಿಸ್ಮಯಲೋಕವೊಂದನ್ನು ತಿಳಿಸಿ ಕೊಡುವ ಕೃತಿ idu.

ಗಣಿತದಲ್ಲಿ ಶೂನ್ಯಕ್ಕೆ ಪ್ರಾಧಾನ್ಯ ಬಹಳ. ಗಣಿತವೆಂದರೆ ಅದೊಂದು ಕರಾರುವಾಕ್ಕಾದ ಲೆಕ್ಕಾಚಾರ, ಎಲ್ಲವನ್ನೂ ಅದು ಕೂಡಿ-ಕಳೆದು-ಗುಣಿಸಿ-ಭಾಗಿಸುತ್ತದೆ - ಬ್ರಹ್ಮಾಂಡವನ್ನಷ್ಟೆ ಅಲ್ಲ; ಪರಮಾಣುವನ್ನೂ ಸಹ - ಇಂಥ ಹೇಳಿಕೆಯನ್ನೇ ಗಣಿತಲೋಕ ತಲೆಕೆಳಗಾಗಿಸಿದರ ಕುರಿತ ವಿವರಗಳೊಂದಿಗೆ ಓದಿ ಖುಷಿಪಡುವಂಥ ಸ್ವಾರಸ್ಯಕರ ಲೇಖನಗಳು ಇಲ್ಲಿವೆ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books