ಆಘಾತ ಹಾಕಿ ಜಗವ ಬದಲಾಯಿಸಿ

Author : ಚಂದ್ರಕಾಂತ ಪೋಕಳೆ

Pages 96

₹ 68.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಅಂಚೆಪಟ್ಟಿಗೆ ಸಂಖ್ಯೆ:5159 ಬೆಂಗಳೂರು-560 001
Phone: (080-22203580/01/02)

Synopsys

ಬಡತನದ ಕುಟುಂಬದಲ್ಲಿ ಜನಿಸಿದ ಅಣ್ಣಾಭಾವು ಸಾಠೆ ಅವರು ಜಾತಿನಿಂದನೆಗೆ ಒಳಗಾದವರು. ನಂತರ ಸಾಹಿತಿಯಾಗಿ, ಕಲಾವಿದನಾಗಿ, ಹೋರಾಟಗಾರನಾಗಿ ಗುರುತಿಸಿಕೊಂಡವರು. ಅವರ ಹೆಸರಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಈವರೆಗೆ ಮಹಾರಾಷ್ಟ್ರದಲ್ಲಿ ಏಳು ಸಮ್ಮೇಳನಗಳು ನಡೆದರೆ ಎಂಟನೇ ಸಮ್ಮೇಳನ ನಡೆದದ್ದು ಕನ್ನಡ ನಾಡಿನ ಕಲಬುರಗಿಯಲ್ಲಿ.  ಸಮ್ಮೇಳನದ ಅಂಗವಾಗಿ ವಿವಿಧ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳನ್ನು ಪಟ್ಟಿ ಮಾಡಿ ನೀಡಲಾಗಿದೆ. 

ಕನ್ನಡ-ಮರಾಠಿ ಪರಂಪರೆಯ ಕೊಂಡಿಯಂತೆಯೂ ಇರುವ ಅಣ್ಣಾಭಾವು ಸಾಠೆ ಅವರನ್ನು ಅರಿಯಲು ಈ ಕೃತಿ ಸಹಕಾರಿಯಾಗುತ್ತದೆ. 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books