ಅಜಾತಶತ್ರು

Author : ಶಾಲಿನಿ ಮೂರ್ತಿ

Pages 124

₹ 110.00




Year of Publication: 2020
Published by: ತೇಜು ಪಬ್ಲಿಕೇಷನ್ಸ್
Address: ನಂ. 1014, 24ನೇ ಮುಖ್ಯರಸ್ತೆ, 16ನೇ ಕ್ರಾಸ್, ಬಿ.ಎಸ್.ಕೆ. 2ನೇ ಹಂತ, ಬೆಂಗಳೂರು- 560070

Synopsys

‘ಅಜಾತಶತ್ರು’ ಡಾ. ಯು. ಚಿತ್ತರಂಜನ್ ಒಂದು ಸ್ಮರಣೆ. ಲೇಖಕಿ ಶಾಲಿನಿ ಮೂರ್ತಿ ಅವರು ಸಂಪಾದಿಸಿರುವ ಕೃತಿ. ಲೇಖಕಿಯ ಅಣ್ಣನಾಗಿ, ಸಮಾಜ ಸೇವಾನಿರತರಾಗಿ ಜನಮಾನಸದಲ್ಲಿ ಉಳಿದ ಭಟ್ಕಳದ ರಂಜನ್ ಡಾಕ್ಟರ್ ಎಂದೇ ಖ್ಯಾತಿಯ ಡಾ. ಚಿತ್ತರಂಜನ್ ಅವರ ಪರಿಚಯಾತ್ಮಕ ಕೃತಿ ಇದು.

ಸಾಹಿತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಕೃತಿಗೆ ಮುನ್ನುಡಿ ಬರೆದು ‘ ಡಾ. ಚಿತ್ತರಂಜನ್ ಅವರ ಕೌಟುಂಬಿಕ ವಿವರಗಳೊಡನೆಯೇ ಅವರ ಸಮಾಜಮುಖಿ ಚಿಂತನೆಗಳು, ಸೇವಾ ತತ್ಪರತೆ, ಸಂವೇದನಶೀಲತೆ, ಜನಸ್ಪಂದನಗಳ ವಿವರಣಾತ್ಮಕ ಸಂಕ್ಷಿಪ್ತ ಭಿತ್ತಿಯಾಗಿ ಈ ಪುಸ್ತಕ ಪ್ರಕಟವಾಗಿದೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಶಾಲಿನಿ ಮೂರ್ತಿ

ಲೇಖಕಿ ಶಾಲಿನಿ ಮೂರ್ತಿ ಅವರು ಮೂಲತಃ ಉಡುಪಿಯವರು. ತಂದೆ ಉಪ್ಪೂರು ಶ್ರೀನಿವಾಸ ಭಟ್ಟ, ತಾಯಿ ವಸಂತಿ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎ. ಪೂರ್ಣಗೊಳಿಸಿದರು. ಪತಿ ಅಶೋಕ ಮೂರ್ತಿ ಅವರ ‘ಎರ್ಕಾಡಿ ಸಿಸ್ಟಮ್ಸ್ ’ ನಲ್ಲಿ ಪಾಲುದಾರರು. ಮೂಲ ಟೆಕ್ನಾಲೆಜಿಯ ಡೈರೆಕ್ಟರ್ ಕೂಡಾ ಆಗಿದ್ದರು. ಬೆಂಗಳೂರಿನ ಎಲ್.ಸಿ.ಯ ಟ್ರಸ್ಟ್,ನ ಧರ್ಮದರ್ಶಿಗಳು. ಇದರ ಅಡಿ ಸುಮಾರು 13 ಸರಕಾರಿ ಶಾಲೆಗಳ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು, ಬೆಳೆಸಿದ್ದಾರೆ.  ಕೃತಿಗಳು: ಅಜಾತ ಶತ್ರು (ಡಾ. ಯು. ಚಿತ್ತರಂಜನ್ ಕುರಿತು)  ...

READ MORE

Related Books