ಅಜ್ಜನ ಅಂದದ ಕಥೆಗಳು

Author : ಕಂಚ್ಯಾಣಿ ಶರಣಪ್ಪ

Pages 98

₹ 50.00
Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560034
Phone: 080-22107736

Synopsys

ಸರಳ ಮತ್ತು ರುಚಿಕಟ್ಟಾದ ಕಥೆ ಹೇಳುವ ಶೈಲಿಯಿಂದ ಮಕ್ಕಳು ವಂಚಿತರಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ , ಮಕ್ಕಳ ಸಮಗ್ರ ವಿಕಸನವನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ತನ್ನ ಒಡಲೊಳಗಿನ ಇಪ್ಪತ್ತೈದು ಕಥಾರತ್ನಗಳನ್ನು ಈ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಸಮರ್ಪಿಸಲಾಗಿವೆ. ತಮ್ಮ ಕಥೆಗಳ ಮೂಲಕ, ಕಳೆದುಹೋಗುತ್ತಿರುವ ಕೌಟುಂಬಿಕ ಸೌಂದರ್ಯವನ್ನು ಈಗಿನ ಮಕ್ಕಳಿಗೆ ಮರುಕಳಿಸುವ ಲೇಖಕ “ಕಂಚ್ಯಾಣಿ ಶರಣಪ್ಪ”ನವರ ಪ್ರಯತ್ನ ಈ ಕೃತಿಯಲ್ಲಿ ಅಡಗಿದೆ.

About the Author

ಕಂಚ್ಯಾಣಿ ಶರಣಪ್ಪ

ಶಿಶು ಸಾಹಿತ್ಯದ ಕಣ್ಮಣಿ ಎಂದೇ ಕರೆಸಿಕೊಳ್ಳುವ ಕಂಚ್ಯಾಣಿ ಶರಣಪ್ಪನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಎಂಬಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ಹುಟ್ಟಿದ್ದು ಕಡುಬಡತನದ ಕುಟುಂಬದಲ್ಲಿ. ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಇತರರ ಹಂಗಿಗೆ ಬೀಳದ ಸ್ವಾಭಿಮಾನಿ ಕಂಚ್ಯಾಣಿ ಶರಣಪ್ಪ. ಶಾಲಾ ಶಿಕ್ಷಕರ ತರಬೇತು ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇರಿದ ನಂತರ ಎಂ.ಎ. ಪದವಿ ಪಡೆದ ಛಲಗಾರರು. 39 ವರ್ಷಗಳ ದೀರ್ಘ ಕಾಲದ ಬೋಧನೆಯಲ್ಲಿ ನಿರತರಾಗಿದ್ದು 1988 ರಲ್ಲಿ ನಿವೃತ್ತಿ ಪಡೆದರು.  ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ...

READ MORE

Related Books