ಅಜ್ಜಿ ಹೇಳಿದ ಕಥೆಗಳು

Author : ಡಾ. ಅನುಸೂಯಾದೇವಿ

Pages 160

₹ 120.00
Year of Publication: 2012
Published by: ದೇಸಿ ಪುಸ್ತಕ ಪ್ರಕಾಶನ
Address: ದೇಸಿ ಪುಸ್ತಕ ಪ್ರಕಾಶನ, #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಆಧುನೀಕರಣಕ್ಕೆ ಒಳಗಾದ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಕಥೆ ಹೇಳುವ, ಜೊತೆ ಇದ್ದು ಅವರ ಬೆಳವಣಿಗೆಗೆ ಸಹಾಯಕವಾಗುವ ಸಂಸ್ಕೃತಿ ಮರೆಯಾಗಿ, ಟಿವಿ, ಮೊಬೈಲ್ ಗಳನ್ನು ನೀಡಿ ಸುಮ್ಮನಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಹಿಂದಿನ ಕಾಲದಲ್ಲಿ ಟಿವಿ ಮೊಬೈಲ್ ಇಲ್ಲದ ಕಾಲದಲ್ಲಿ ಹಿರಿಯರು ಮಕ್ಕಳನ್ನು ಹತ್ತಿರ ಕೂರಿಸಿಕೊಂಡು ಕುತೂಹಲಕಾರಿ ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ ಏಕಾಗ್ರತೆ, ಊಹಿಸಿಕೊಳ್ಳುವ ಶಕ್ತಿ, ಕಲ್ಪನಾ ಸಾಮರ್ಥ್ಯ ಬೆಳೆಯಲು ಸಹಕರಿಸುತ್ತಿದ್ದರು, ಇಂಥ ಕಥೆಗಳಿಂದ, ಕಥೆಗಳು ಹೇಳುವ ನೀತಿಯಿಂದ ಮಕ್ಕಳು ಸೂಕ್ಷ್ಮ ಸಂವೇದನೆಗಳನ್ನು ಕಲಿಯುತ್ತಿದ್ದರು. ಅಂತಹ  ಕಥೆಗಳನ್ನು ಡಾ.ಅನುಸೂಯಾದೇವಿಯವರು ಈ ಕೃತಿಯಲ್ಲಿ ಹಿಡಿಯಾಗಿ ನೀಡಿದ್ದಾರೆ. 

About the Author

ಡಾ. ಅನುಸೂಯಾದೇವಿ
(31 October 1949)

ಸಾಹಿತ್ಯ, ಸಂಗೀತ, ನಟನೆ, ವಾಙ್ಮಯ ಹೀಗೆ ಹಲವಾರು ಪ್ರತಿಭೆಗಳ ಸಂಗಮವಾಗಿರುವ ಅನಸೂಯಾದೇವಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ತಂದೆ ದಕ್ಷಿಣ ಕನ್ನಡ ಮೂಲದವರಾದ ತಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ. ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರು,  ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮಂಗಳೂರು ವಿಶ್ವವಿದ್ಯಯಾಲಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಉದ್ಯೋಗಕ್ಕಾಗಿ ಬೋಧನಾವೃತ್ತಿ ಆಯ್ದುಕೊಂಡ ಅನುಸೂಯದೇವಿಯವರು ಪ್ರಸ್ತುತ ಬೆಂಗಳೂರಿನ ಬಿ.ಎಚ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿ, ವಿಭಾಗದ ಮುಖ್ಯಸ್ಥೆಯಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ಶಾಲಾ ಕಾಲೇಜು ದಿನಗಳಿಂದಲೂ ನಟನೆಯಲ್ಲಿ ಪಳಗಿದವರಾದ ಅನುಸೂಯದೇವಿಯವರು ಬಾಲ ಕಲಾವಿದೆಯಾಗಿ ಆಕಾಶವಾಣಿಯ ಹಲವಾರು ಕಾರ‍್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ...

READ MORE

Related Books