ಅಜ್ಜಿ ‘ಪಂಚ್’ತಂತ್ರ

Author : ಅನಿತಾ ನಾಡಿಗ್

₹ 90.00




Year of Publication: 2014
Published by: ವಿವಿದ್‌ಲಿಪಿ
Address: 71, 4ನೇ ಕ್ರಾಸ್‌, ಕಾನ್‌ಕರ್ಡ್‌ ಲೇಔಟ್‌, ರಾಜರಾಜೇಶ್ವರಿ ನಗರ, ಬೆಂಗಳೂರು– 560059
Phone: 9535015489

Synopsys

ಲೇಖಕಿ ಅನಿತಾ ನಾಡಿಗ್‌ ಅವರ ಲಲಿತ ಪ್ರಬಂಧ ಕೃತಿ ʼಅಜ್ಜಿʼಪಂಚ್ʼತಂತ್ರʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ಜೀವನದ ಚೈತನ್ಯ, ಉತ್ಸಾಹಗಳಿಗೆ ಜೀವಸೆಲೆ ನಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವಳ ಕಷ್ಟ, ಅವಹೇಳನ, ಅವಮಾನ ಆಕೆ ಅನುಭಸಿದಷ್ಟು ಇನ್ನಾರೂ ಅನುಭವಿಸಿಲ್ಲ. ಇವುಗಳೆಲ್ಲದರ ನಡುವೆ, ಆಕೆಯ ಜೀವನೋತ್ಸಾಹ ಕುಗ್ಗಿಲ್ಲ. ಬದುಕಿನ ಹೋರಾಟ ಸ್ಫೂರ್ತಿ ಕಳೆದುಕೊಂಡಿಲ್ಲ. ಅಂದಿನಿಂದ ಇಂದಿನವರೆಗೆ, ನಮ್ಮೆಲ್ಲರ ಅಳು- ನಗುವಿಗೆ ಸಹವರ್ತಿಯಾಗಿದ್ದಾಳೆ. ತುಂಬಾ ಗಂಭೀರವಾಗಿ ಹೇಳಬೇಕೆಂದರೆ ಹೆಣ್ಣು-ಮಗು, ಬಾಲೆ, ಹುಡುಗಿ, ಮಹಿಳೆ, ಮುದುಕಿ ಎಲ್ಲಾ ಪಾತ್ರಗಳಲ್ಲಿ, ಎಲ್ಲ ಅವಸ್ಥೆಗಳಲ್ಲಿ ವ್ಯವಸ್ಥೆಯ ಒತ್ತಡದಲ್ಲಿ ಸಂಘರ್ಷದ ಬದುಕು ಸಾಗಿಸಿದ್ದಾಳೆ. ಇವುಗಳ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದಾಳೆ. ಅವಳ ಹೋರಾಟವೆ ಒಂದೊಂದು ಮಹಾಕಾವ್ಯಗಳಾಗಿವೆ. ಆ ಹೋರಾಟದ ಕತೆಗಳಿಗೆ ಕಾಲಘಟ್ಟ, ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಹೆಸರು, ವರ್ಷಗಳ ಸಂಕೇತವಿದೆ ಮಂಥರೆಯ ಬದುಕಿನ ಆಸೆ ಸೀತೆಗೆ ವನವಾಸ ಒದಗಿಸಿದ್ದಿರಬಹುದು. ಅವಳ ಬದುಕಿನ ಭದ್ರತೆಯ ಅನಿವಾರ್ಯತೆ, ತನ್ನ ಅಸ್ಥಿತ್ವಕ್ಕೆ ಆ ಸಂದರ್ಭದಲ್ಲಿ ಆ ರೀತಿಯ ಮಾತು ವರ್ತನೆಯನ್ನು ಸೃಷ್ಟಿಸಿರಬಹುದಲ್ಲವೆ? ಅದು ಪುರಾತನ ಕಥೆ. ಹೀಗೆ ಹತ್ತು ಹಲವು ನಮ್ಮಲ್ಲಿ ಸಿಗುತ್ತವೆ. ಅವು ಆ ಪಾತ್ರಗಳ ದುರಂತವನ್ನು, ಕರುಣೆಯನ್ನು, ಮರುಕವನ್ನು, ಹಾಸ್ಯವನ್ನು ಸೃಷ್ಟಿಸುತ್ತವೆ” ಎಂದಿದ್ದಾರೆ.

About the Author

ಅನಿತಾ ನಾಡಿಗ್

ಲೇಖಕಿ ಅನಿತಾ ನಾಡಿಗ್ ಅವರು ಎಂಜಿನಿಯರಿಂಗ್ ಪದವೀಧರರು. ಸಾಫ್ಟ್ ವ್ಹೇರ್ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ನಂತರ ಅವರು ಮನಃಶಾಸ್ತ್ರವನ್ನು ಅಧ್ಯಯನ ಮಾಡಿ, ಸಮಾಜದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಉದ್ದೇಶದೊಂದಿಗೆ ಮೈಂಡ್ ಸಖ್ಯ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಕೌನ್ಸಿಲಿಂಗ್ ಸೈಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವಾಸ ಹಾಘೂ ಚಾರಣ ಇವರ ಹವ್ಯಾಸ.  ಕೃತಿಗಳು: ಅಜ್ಜಿ ಪಂಚ್ ತಂತ್ರ (ನೈಜ ಘಟನೆ ಆಧರಿತ ಹಾಸ್ಯ ಲಲಿತ ಪ್ರಬಂಧಗಳು) ಭಾವಕ್ಕೆ ತಕ್ಕಂತೆ,    ...

READ MORE

Related Books