ಆಕಾಶದಲ್ಲಿ ಏನಿದೆ? ಏಕಿದೆ?

Author : ಬಿ.ಎಸ್. ಶೈಲಜಾ

Pages 192

₹ 225.00

Buy Now


Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಖಗೋಳ ಯಾವತ್ತಿಗೂ ಮನುಷ್ಯನ ಕುತೂಹಲದ ಕೇಂದ್ರ. ಆದಿಮ ಕಾಲದಿಂದಲೂ ಮನುಷ್ಯ ಆಕಾಶದ ಕಡೆಗೆ ಒಂದು ದೃಷ್ಟಿ ನೆಟ್ಟೇ ಇರುವವನು. ವಿಜ್ಞಾನ ಬೆಳೆದಂತೆಲ್ಲಾ ಮನುಷ್ಯನ ಕೌತುಕದ ಅಂತರಿಕ್ಷ ಮತ್ತೂ ವಿಸ್ತರಿಸಿಕೊಳ್ಳುತ್ತಿದೆ. ಅಂತಹ ಅನಂತ ಆಕಾಶವನ್ನು ಕನ್ನಡದ ವಿಜ್ಞಾನಾಸಕ್ತರಿಗೆ ಪರಿಚಯಿಸುವ ಕೃತಿ  ’ಆಕಾಶದಲ್ಲಿ ಏನಿದೆ? ಏಕಿದೆ?’

ಬರಿಗಣ್ಣು ಅಥವಾ ಸರಳ ಸಾಧನಗಳನ್ನು ಬಳಸಿ ಆಕಾಶವನ್ನು ಅಧ್ಯಯನ ಮಾಡುವುದರ ಕುರಿತು ಲೇಖಕಿ ಚರ್ಚಿಸಿರುವುದು ಕೃತಿಯ ವಿಶೇಷ. ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಕೆರಳಿಸಲು ಪೋಷಕರಿಗೆ ಅನುಕೂಲವೊದಗಿಸುವ ಗ್ರಂಥವೂ ಹೌದು. 

ಕೃತಿ ಹದಿಮೂರು ಅಧ್ಯಾಯಗಳನ್ನು ಒಳಗೊಂಡಿದ್ದು ಲೆಂಡರ್‌ಗಳು, ಗ್ರಹಣಗಳು, ಗ್ರಹಣ ವೀಕ್ಷಣೆಯ ಮೋಜು, ಉಲ್ಕೆಗಳು, ಧೂಮಕೇತುಗಳು, ನಕ್ಷತ್ರಗಳು, ನಕ್ಷತ್ರ ಪುಂಜಗಳು, ಆಕಾಶಕ್ಕೆ ನಮ್ಮ ಕೊಡುಗೆ, ಅತೀ ಸಮೀಪದ ನಕ್ಷತ್ರ –ಸೂರ್ಯನ ವಿವರಗಳನ್ನು ಒದಗಿಸುತ್ತದೆ.

ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಬಿಸಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ದೊರೆತಿದೆ.

About the Author

ಬಿ.ಎಸ್. ಶೈಲಜಾ

ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್.  ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ...

READ MORE

Related Books