ಲೇಖಕಿ ಡಾ. ಲೀಲಾವತಿ ಆರ್ ಪ್ರಸಾದ್ ಅವರು ಸಂಪಾದಿಸಿದ ಕೃತಿ-ಅಕ್ಕ ಮಹಾದೇವಿ ಚರಿತೆ ಸಾಹಿತ್ಯ ಸಮಗ್ರ ಸಂಪುಟ. 12ನೇ ಶತಮಾನದ ಶರಣರ ಪೈಕಿ ಅಕ್ಕ ಮಹಾದೇವಿಯ ವಚನಗಳು ವೈರಾಗ್ಯ, ವಿರಕ್ತಿಯ ಭಾವಗಳನ್ನು ಒಳಗೊಂಡಿವೆ. ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ಸಂಪ್ರದಾಯ ಸಿದ್ಧವಾದ ಆಚರಣೆಗಳನ್ನು ಧಿಕ್ಕರಿಸಿ, ತಮ್ಮದೇ ಹೊಸ ವೈಚಾರಿಕ ನೆಲೆಯಲ್ಲಿ ನಡೆದು, ಹೊಸ ಮಾರ್ಗ ನಿರ್ಮಿಸಿದರು. ಅವರ ಸಾಹಿತ್ಯ ವಿಶ್ವಮಟ್ಟದ್ದು, ಅವರ ವೈಚಾರಿಕತೆಯು ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸುತ್ತದೆ. ಲಿಂಗ ಸಮಾನತೆಯನ್ನು ಸಮರ್ಥಿಸಿಕೊಳ್ಳುತ್ತದೆ. ಇಂತಹ ಸಾಹಿತ್ಯ ಸಂಗ್ರಹದ ಸಂಪುಟವಾಗಿ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
©2023 Book Brahma Private Limited.