ಅಕ್ಕಮಹಾದೇವಿ ವಚನಗಳು: ಸಾಂಸ್ಕೃತಿಕ ಮುಖಾಮುಖಿ

Author : ರಹಮತ್ ತರೀಕೆರೆ

Pages 228

₹ 80.00




Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ 583278

Synopsys

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ನಡೆದ 12ನೇ ಶತಮಾನದ ವಚನಕಾರ್ತಿ ಅಕ್ಕ ಮಹಾದೇವಿಯ ವಚನಗಳ ಜೊತೆಗಿನ ಸಾಂಸ್ಕೃತಿಕ ಮುಖಾಮುಖಿ ಕಾರ್ಯಕ್ರಮದ ಬರಹಗಳನ್ನು ಒಳಗೊಂಡಿದೆ. ಈ ಗ್ರಂಥದಲ್ಲಿ ಕೇವಲ ಕಾರ್ಯಕ್ರಮದ ಪ್ರಬಂಧಗಳು ಮಾತ್ರವಲ್ಲದೆ ಅದುವರೆಗೆ ನಡೆದ ಅಕ್ಕಮಹಾದೇವಿ ಕುರಿತ ಚರ್ಚೆ- ಸಂವಾದಗಳ ಮಹತ್ವದ ಬರಹಗಳನ್ನೂ ಸಂಪಾದಿಸಿ ಪ್ರಕಟಿಸಲಾಗಿದೆ. ಸಂಪಾದಕ ರಹಮತ್ ತರೀಕೆರೆ ಅವರ ಸೊಗಸಾದ ಪ್ರಸ್ತಾವನೆಯಿದೆ. ಉದ್ಘಾಟನೆ ಮಾಡಿದ ರಾಜೇಂದ್ರ ಚೆನ್ನಿ ಅವರು ‘ಅಕ್ಕನಿಗೇ ಯಾಕೆ ಈ ಒರೆಗಲ್ಲು?’ ಎಂಬ ಪ್ರಶ್ನೆಯೊಂದಿಗೆ ಚರ್ಚೆಗೆ ನಾಂದಿ ಹಾಡಿದ್ದಾರೆ. ದು. ಸರಸ್ವತಿ ಅವರು ‘ಮುಳುಗಿ ಮೀರುವ ಪರಿ’, ಚಂದ್ರಶೇಖರ ತಾಳ್ಯ ಅವರು ‘ಅಕ್ಕನ ಸಂವೇದನೆ: ನೆರೆವ ಪರಿಕರ ಹೊಸತು’ ಎಂದು ಬರೆದಿದ್ದಾರೆ. ಸುಧಾ ಸೀತಾರಾಮನ್ ಅವರು ಅಕ್ಕ ಮತ್ತು ಸ್ತ್ರೀವಾದಿ ಸಂವೇದನೆ ಕುರಿತು ಚರ್ಚಿಸಿದರೆ ಎಸ್.ಜಿ. ಸಿದ್ಧರಾಮಯ್ಯ ಅವರ ‘ಹರನ ಕೂಡೆ ಹಾದರ’ ಎಂಬ ಬರಹ ಇದೆ. ಧರಣಿದೇವಿ ಮಾಲಗತ್ತಿ ಅವರು ‘ಅಕ್ಕ: ದ್ವಂದ್ವಗಳ ಸಮನ್ವಯಕ್ಕೊಂದು ಹೆಸರು’ ಎಂದರೆ ಎನ್.ಕೆ. ಹನುಮಂತಯ್ಯ ‘ಅಕ್ಕನ ಅಕ್ರಮ ಸಂಗಾತದ ಸೌಂದರ್ಯ’ ಕುರಿತು ಬರೆದಿದ್ದಾರೆ. ಮಮತಾ ಜಿ. ಸಾಗರ ಅವರು ಅಕ್ಕ ಹಾಗೂ ಸಮಕಾಲೀನ ಮಹಿಳಾ ಕಾವ್ಯ ಸಂದರ್ಭ ಕುರಿತು ಚರ್ಚಿಸಿದರೆ ಎಸ್. ಸಿರಾಜ್ ಅಹಮದ್ ಅವರು ಅಕ್ಕನ ವಚನಗಳ ಓದನ್ನು ಮರುಪರಿಶೀಲನೆಗೆ ಒಳಪಡಿಸಿದ್ದಾರೆ. ವೀಣಾ ಬನ್ನಂಜೆ ಅವರು ‘ಅಕ್ಕ ಹಾಗೂ ಮಹಿಳೆಯ ಅಸಾಂಪ್ರದಾಯಕ ಸಾಹಸಗಳು’ ಕುರಿತು ಬರೆದರೆ, ಎನ್. ಗಾಯತ್ರಿ ಅವರು ‘ಅಕ್ಕ: ಕದಳಿಯ ಜ್ಯೋತಿ’ ಎಂದು ವ್ಯಾಖ್ಯಾನಿಸಿದ್ದಾರೆ. ಎನ್.ಕೆ. ರಾಜಲಕ್ಷ್ಮಿ, ಕೆ. ನೀಲಾ, ಸಬಿತಾ, ಎಚ್.ಎಂ. ಚೆನ್ನಯ್ಯ, ವಿಜಯಾ ದಬ್ಬೆ, ಬಂಜಗೆರೆ ಜಯಪ್ರಕಾಶ್, ವಿಜಯಾ ಗುತ್ತಲ, ಎಂ.ಎಸ್. ಆಶಾದೇವಿ ಅವರು ಅಕ್ಕಮಹಾದೇವಿಯ ವಚನಗಳ ವಿವಿಧ ಆಯಾಮಗಳನ್ನು ಚರ್ಚಿಸಿದ್ದಾರೆ. ಎ.ಕೆ. ರಾಮಾನುಜನ್ ಅವರ ‘ಮಹಿಳಾ ಸಂತರು’ ಲೇಖನದ ಕನ್ನಡ ಅನುವಾದ ಸೇರಿಸಲಾಗಿದೆ. ಟಿ.ಎಂ. ಉಷಾರಾಣಿ ಅವರು ಅಕ್ಕಮಹಾದೇವಿ ಅಧ್ಯಯನಗಳ ಸಮೀಕ್ಷೆ ನೀಡಿದ್ದಾರೆ. ಕೆ. ರಾಘವೇಂದ್ರರಾವ್ ಅವರು ಸಮಾರೋಪದಲ್ಲಿ ‘ಅಕ್ಕನ ಮೂರು ಮುಖಗಳು’ ಕುರಿತು ಮಾತಾಡಿದ್ದರ ಬರಹರೂಪವಿದೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books