ಅಕ್ಕಡಿ ಕಾಳು

Author : ಜೀವರಾಜ ಹ ಛತ್ರದ

Pages 92

₹ 110.00
Year of Publication: 2021
Published by: ಶ್ರೀ ಗುರು ಕರಿಬಸವೇಶ್ವರ ಪ್ರಕಾಶನ,
Address: ಹಿರೇಬೂದಿಹಾಳ, ತಾ. ಹಿರೇಕೆರೂರು-581109, ಜಿ. ಹಾವೇರಿ

Synopsys

ಲೇಖಕ, ಕವಿ ಜೀವರಾಜ ಹ ಛತ್ರದ ಅವರ ’ ಅಕ್ಕಡಿ ಕಾಳು’ ವೈಚಾರಿಕ ಲೇಖನಗಳ ಸಂಗ್ರಹ ಕೃತಿ. ಒಟ್ಟು 26 ಲೇಖನಗಳನ್ನು ಒಳಗೊಂಡಿದ್ದು, ಪ್ರತಿ ಬಿಡಿ ಲೇಖನವೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಭಾರತದ ಪ್ರಚಲಿತ ಸಮಸ್ಯೆಗಳು, ಮಕ್ಕಳು, ತಾಯಿ, ಆಟೋಟಗಳು, ಭಾರತದ ಸಂಸ್ಕೃತಿ, ಸಾಧಕರು ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡ ಲೇಖನಗಳು ಇಲ್ಲಿವೆ. ‘ಅಕ್ಕಡಿ ಕಾಳು’ ಪದ ವಿಚಿತ್ರವಾಗಿದ್ದರೂ ಗ್ರಾಮೀಣ ಭಾಗದಲ್ಲಿ ಈ ಪದವನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಲಾಗುತ್ತದೆ. ರೈತರಿಗೆ ಈ ಪದ ಮನೆಮಾತಾಗಿದೆ. ಲೇಖಕನು ತನ್ನ ಒಳತೋಟಿಯನ್ನು ತುಮುಲಗಳನ್ನು ಬಾಯಿಯಿಂದ ಹೇಳದೇ ಅಕ್ಷರ ರೂಪದಲ್ಲಿ ಸಾದರ ಪಡಿಸಿರುವುದೇ ಈ ಸಾಹಿತ್ಯವೆನ್ನಬಹುದಾದ ಎಲ್ಲ ಗುಣಗಳು ಈ ಲೇಖನಗಳಲ್ಲಿ ಎದ್ದು ಕಾಣುತ್ತದೆ.

 

About the Author

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...

READ MORE

Related Books