ಅಕ್ಷರ ಭಾರತಿ

Author : ವಿವಿಧ ಲೇಖಕರು

Pages 224

₹ 220.00




Year of Publication: 2021
Published by: ನವಭಾರತೀ ಪ್ರಕಾಶನ
Address: ಸರಸ್ವತಿಪುರಂ, ಮೈಸೂರು

Synopsys

`ಅಕ್ಷರ ಭಾರತಿ' ಜಿ.ಯು.ಭಟ್ಟ ಅವರ ಕೃತಿಯಾಗಿದೆ. ಹೊನ್ನಾವರವನ್ನು, ಉತ್ತರಕನ್ನಡ ಜಿಲ್ಲೆಯನ್ನು ತನ್ನ ಎದೆಯ ಮೇಲೆ ಇಟ್ಟು ಪೂಜಿಸುವ ಅಕ್ಷರ ಪೂಜಾರಿ ಜಿ. ಯು. ಅನುದಿನ ಇಲ್ಲಿ ನಡೆಯುವ ವಿದ್ಯಮಾನಗಳು, ವ್ಯಕ್ತಿ- ವಿಷಯ-ವಿಚಾರಗಳ ಕುರಿತು ಎಡಬಿಡದೇ ಜನರಿಗೆ ತಿಳಿಯಬೇಕಾದ ಸಂಗತಿಗಳನ್ನು ಸಕಾಲದಲ್ಲಿ ನಿರುದ್ಯೋಗದಿಂದ ದಾಖಲಿಸುವ ಕನ್ನಡನಾಡಿನ ಹೆಮ್ಮೆಯ ಕ್ರಿಯಾಶೀಲ ಪತ್ರಕರ್ತ. ಅವರಿಗೆ ವರ್ಷ 74 ಆದರೂ 24ರ ಹರೆಯದ ಉತ್ಸಾಹ. ಚಟುವಟಿಕೆಯ ಚಿಲುಮೆಯಂತೆ ಲವಲವಿಕೆಯಿಂದ ಇರುವ ವ್ಯಕ್ತಿ ಅವರು. ಅದಕ್ಕೇ ಅವರನ್ನು ನಾನು 'ನಮ್ಮ ಉತ್ತರಕನ್ನಡ ಜಿಲ್ಲೆಯ ಹರಿಯುವ ನದಿ, ನಿಂತ ನಿಲುವಿನಲ್ಲಿ ಊರಿಗೆ ಕನ್ನಡಿ ಹಿಡಿಯುವ ಸಾಮರ್ಥ್ಯವುಳ್ಳ ಅದ್ಭುತ ನಿಲುವುಗನ್ನಡಿ' ಎಂದು ಅಭಿಮಾನದಿಂದ ಕಂಡವರಲ್ಲಿ ಹೇಳುತ್ತಿರುತ್ತೇನೆ. ಜನರಿಗೆ ಕಾಲಕಾಲಕ್ಕೆ ಯಾವುದೇ ಮಾಹಿತಿ, ಸುದ್ದಿಯನ್ನು ತಿಳಿಗೊಳಿಸಿ ತಿಳಿಸಿ; ಜನಜೀವನವನ್ನು ಸದಭಿರುಚಿಯ ಸ್ವಚ್ಛತೆಯ ಸಂಸ್ಕಾರದ ಹದಕ್ಕೆ ತರುವ ಶ್ರೀ ಭಟ್ಟರ ಬರೆಹಗಳು ಸಾವಯವ ತರಕಾರಿಯಂತೆ ಸ್ವಾದಿಷ್ಟವೂ ಸತ್ವಯುತವೂ ಆಗಿರುತ್ತವೆ. ಅವರ ಮಾಗಿದ ಮಾತು, ಬೆಲೆಯುಳ್ಳ ವಿಚಾರಪೂರ್ಣ ಯಾವತ್ತೂ ಕನ್ನಡನಾಡಿನ ಸಂಪತ್ತಾಗಿರುತ್ತವೆ. ಓದಿದವರಿಗೆ ಒಂದು ಒಳನೋಟವನ್ನು, ಜೀವನದ ಮರ್ಮ ಮತ್ತು ಮಾಧುರ್ಯವನ್ನು ಸಹಜವಾಗಿ ಕಟ್ಟಿಕೊಡುವ ಬೆಳಕಿನ ಬುತ್ತಿಯಂತೆ ಇರುತ್ತವೆ ಎನ್ನುತ್ತಾರೆ ಕೃಷ್ಣಮೂರ್ತಿ ಹೆಬ್ಬಾರ, ಕರ್ಕಿ.

About the Author

ವಿವಿಧ ಲೇಖಕರು

. ...

READ MORE

Related Books