ಅಕ್ಷರ ವೃಕ್ಷ

Author : ರವೀಂದ್ರ ಸಿಂಗ್

₹ 110.00




Year of Publication: 2022
Published by: ವಸುಂಧರಾ ಪ್ರಕಾಶನ
Address: NO.240, 1ST MAIN, 1ST CROSS, KRISHNAMURTHU LAY-OUT, NEW KANTHARAJE ARSU ROAD, MYSORE-570009
Phone: 9900580394

Synopsys

ಇದೊಂದು ವಿಶಿಷ್ಟ ಜೀವನ ಕಥನ. ಪ್ರೊ.ಶ್ರೀರಾಮ್‌ರವರ ಸಾಹಸಮಯ ಬದುಕನ್ನು ಸರಳವಾಗಿಯೂ ವಸ್ತುನಿಷ್ಠವಾಗಿಯೂ ಕಟ್ಟಿಕೊಡುವ ಜೀವನಗಾಥೆ. ಕೆ.ಜಿ.ಎಫ್. ಎಂದಾಗ ಬಂಗಾರ ನೆನಪಾಗುವುದುಂಟು. ಅದೇ ಹೊತ್ತಿಗೆ ನಮಗೆ ಧೂಳು, ಕೊಳಕು ನೆನಪಾಗುತ್ತದೆ. ಕೋಲಾರ ಜಿಲ್ಲೆ ನೀರಿಲ್ಲದ ಬಡಜಿಲ್ಲೆಯೆಂಬುದು ಎಲ್ಲರಿಗೂ ತಿಳಿದ ಸಂಗತಿ. ಇಂಥ ಹಿನ್ನೆಲೆಯುಳ್ಳ ಕೋಲಾರ ಜಿಲ್ಲೆಗೆ ಸೇರಿದ ‘ಪಾಕರಹಳ್ಳಿ’ ಗ್ರಾಮದಲ್ಲಿ ಜನಿಸಿ ಅಜ್ಜಿ-ಮಾವಂದಿರ ಪ್ರೋತ್ಸಾಹದಿಂದಾಗಿ ಒಂದೊಂದೇ ವಿದ್ಯೆಯ ಮೆಟ್ಟಿಲನ್ನು ಏರಿದ ಬುದ್ಧಿವಂತ ಹುಡುಗ. ಚಿಕ್ಕಂದಿನಲ್ಲಿಯೇ ಬಡತನದ ಬವಣೆ. ಸ್ವಾವಲಂಬಿ ಬದುಕಿನ ಅರ್ಥದ ಪದರುಗಳು ಅವರಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಶ್ರೀರಾಮ್ ಪ್ರಾಥಮಿಕ-ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ ಪ್ರೌಢಶಾಲೆಗೆ ಕಾಲಿಟ್ಟಾಗ ಬದುಕಿನ ಅರ್ಥ ವಿಕಾಸಗೊಳ್ಳುತ್ತದೆ. ಕಾಲೇಜು ದಾಟಿ- ಬೆಂಗಳೂರಿಗೆ ಸ್ನಾತಕೋತ್ತರ ಪದವಿ ಪಡೆಯಲು ಬಂದಾಗ ಉಂಟಾಗುವ ಅನುಭವಗಳನ್ನು ಲೇಖಕರಾದ ಶ್ರೀ ರವೀಂದ್ರಸಿಂಗ್ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಎಂ.ಕಾಂ., ಎಲ್.ಎಲ್.ಬಿ., ಪದವಿ ಪಡೆದ ತರುಣ ಕೆಜಿಎಫ್ ಪದವಿ ಕಾಲೇಜಿಗೆ ಉಪನ್ಯಾಸಕನಾಗಿ ಕಾಲಿಡುವುದರಿಂದ ಬದುಕಿನ ಮತ್ತೊಂದು ಚರಿತ್ರೆ ಪ್ರಾರಂಭವಾಗುತ್ತದೆ. ಹಸಿವು, ಬಡತನಗಳಿಂದ ಮುಕ್ತನಾಗಿ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ ವಿಶಿಷ್ಟ ಅನುಭವವನ್ನು ಲೇಖಕ ರವೀಂದ್ರಸಿಂಗ್ ಮನೋಜ್ಞವಾಗಿ ಇಲ್ಲಿ ಚಿತ್ರಿಸಿದ್ದಾರೆ.

About the Author

ರವೀಂದ್ರ ಸಿಂಗ್
(26 July 1977)

ರವೀಂದ್ರ ಸಿಂಗ್ ಅವರು ಎಂ.ಎ. ಪದವೀಧರರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಅಂಚೆ ವ್ಯಾಪ್ತಿಯ ಬೂರಮಾಕನಹಳ್ಳಿಯವರು. 1977ರ ಜುಲೈ 26 ರಂದು ಜನನ. ಸದ್ಯ, ಕೋಲಾರದ ಆದರ್ಶ ಕಾಲೇಜಿನಲ್ಲಿ ವ್ಯವಸ್ಥಾಪಕರು. ಋತುಗಾನ, ಕಪ್ಪು ಫ್ರೇಮಿನ ಕನ್ನಡಕ (ಕವನ ಸಂಕಲನಗಳು), ದಿಕ್ಕಾಪಾಲು -ಕಾದಂಬರಿ ಹಾಗೂ ಗುಣ ಸಂಪನ್ನ-ಕಥಾ ಸಂಕಲನ ಪ್ರಕಟಗೊಂಡಿವೆ. ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶೇಷ ಸಂಚಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕನ್ನಡ ಸಾಂಸ್ಕೃತಿಕ ಅಕಾಡೆಮಿಯಿಂದ (2007) ಸಾಹಿತ್ಯ ರತ್ನ, ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಬೆಂಗಳೂರು ವತಿಯಿಂದ ಭಾರತ ರತ್ನ ಸರ್ . ...

READ MORE

Related Books