’ಆಳ, ನಿರಾಳ’ ಕಾದಂಬರಿಯು ದೇವರು, ಧರ್ಮ, ನಂಬಿಕೆಗಳನ್ನು ಹೊತ್ತುಕೊಂಡು, ಬದುಕಿನಲ್ಲಿ ಮಾತ್ರ ಹಾಗೆ ಇರದೆ, ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದ ಜನರು ಮತ್ತು ನಂಬಿಕೆಯನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದ ಜನರ ನಂಬಿಕೆಯ ಆಳ ಮತ್ತು ಆಳವಿಲ್ಲದಿರುವಿಕೆಯನ್ನು ಹಲವಾರು ದೃಷ್ಟಿಕೋನಗಳಿಂದ ವಿಶ್ಲೇಷಿಸಿರುವ ಕಾದಂಬರಿ.
ಇದರಲ್ಲಿ ನಮ್ಮ ನಾಡಿನ ರಾಜಕೀಯವನ್ನು ಕುರಿತ ಚಿಂತನ-ಮಂಥನಗಳಿವೆ. ನಮ್ಮ ದೇಶದ ಪುಣ್ಯಕ್ಷೇತ್ರಗಳ ಸಾಂಸ್ಕೃತಿಕ ದೃಷ್ಟಿಯ ಅನ್ವೇಷಣೆಯೂ ಹಲವು ಜನರ ಚರ್ಚೆ, ಅಭಿಪ್ರಾಯ, ನಂಬಿಕೆ, ಶಾಸ್ತ್ರಾಭ್ಯಾಸಗಳ ಮೂಲಕ ಸಾಗಿ, ಈ ಕಾದಂಬರಿಯ ಒಟ್ಟು ಶಿಲ್ಪ ಕಡೆಯಲ್ಪಟ್ಟು, ಕಥಾಂಶ ಚಿಕ್ಕದಾದರೂ, ಕಾದಂಬರಿ ಸಾಕಷ್ಟು ವಿಸ್ತಾರವಾಗಿ ಬೆಳೆದು, ಓದುಗನನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MOREಆಳ ನಿರಾಳ ಕೃತಿಯ ಕುರಿತು ಲೇಖಕರಾದ ದೊಡ್ಡರಂಗೇಗೌಡ ಅವರ ಮಾತುಗಳು