ಅಲೆಮಾರಿಯೊಬ್ಬನ ಆತ್ಮಕಥೆ

Author : ಟಿ.ಡಿ.ರಾಜಣ್ಣ ತಗ್ಗಿ

Pages 244

₹ 180.00




Year of Publication: 2015
Published by: ದೇಸಿ ಪುಸ್ತಕ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಲೇಖಕ ಟಿ.ಡಿ. ರಾಜಣ್ಣ ತಗ್ಗಿ ಅವರ ಅನುವಾದಿತ ಕೃತಿ-ಅಲೆಮಾರಿಯೊಬ್ಬನ ಆತ್ಮಕತೆ. ಜೋನಾಥನ್ ಸ್ವಫ್ಟ್ ಅವರ ಮೂಲ ಇಂಗ್ಲಿಷ್ ಕೃತಿಯನ್ನು (Gulliver Travels) ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲೆಮಾರಿಯೊಬ್ಬನ ವಿಭಿನ್ನ ಮತ್ತು ವಿಶಿಷ್ಟ ಬಗೆಯ ಯಾತ್ರೆಗಳ ಅನುಭವ, ಫ್ಯಾಂಟಸಿ ನೆಲೆಯಲ್ಲಿ ಸಾಗುವ ಅದ್ಭುತ ಮತ್ತು ರೋಮಾಂಚನ ಕಥಾನಕವೂ ಹೌದು.. ಲಿಲ್ಲಿಪುತ್ ಪ್ರಪಂಚದ ಮತ್ತು ಹಾರುವ ದ್ವೀಪಗಳಂತಹ ರಮ್ಯ ಜಗತ್ತನ್ನು ವಿವರಿಸಲಾಗಿದೆ. ಮಾತಾಡುವ ಕುದುರೆಗಳು ಪ್ರತಿಪಾದಿಸುವ ಮನುಷ್ಯ ಬದುಕಿನ ಶೋಧವೂ ಹೌದು. ಇದು ಜೀವನ ಮೌಲ್ಯವನ್ನು ಬೋಧಿಸುವ ಹಾಗೂ ಬೌದ್ಧಿಕ ಕಸರತ್ತನ್ನು ತುಂಬುವ ಕಾದಂಬರಿಯಾಗಿದೆ.

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books